ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಿ

ಧಾರವಾಡ ಜಯದೇವಿ ತಾಯಿ ಬಾಲಿಕೆಯರ ಪ್ರೌಢಶಾಲೆಯ ವಿದ್ಯಾರ್ಥಿ ಸಂಸತ್​ ಪದಗ್ರಹಣ ಸಮಾರಂಭದಲ್ಲಿ ಉದ್ಯಮಿ ಮಹೇಶ ಶೆಟ್ಟಿ ಪ್ರತಿಜ್ಞಾವಿಧಿ ಬೋಧಿಸಿದರು.
ಧಾರವಾಡ ಜಯದೇವಿ ತಾಯಿ ಬಾಲಿಕೆಯರ ಪ್ರೌಢಶಾಲೆಯ ವಿದ್ಯಾರ್ಥಿ ಸಂಸತ್​ ಪದಗ್ರಹಣ ಸಮಾರಂಭದಲ್ಲಿ ಉದ್ಯಮಿ ಮಹೇಶ ಶೆಟ್ಟಿ ಪ್ರತಿಜ್ಞಾವಿಧಿ ಬೋಧಿಸಿದರು.
Published on
ಧಾರವಾಡ: ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ. 33 ಸೀಟುಗಳು ಮೀಸಲಿದ್ದು, ವಿದ್ಯಾರ್ಥಿಯರೂ ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬೇಕು. ಸಂವಿಧಾನದ ಅಡಿ ಎಲ್ಲರಿಗೂ ಸಮಾನ ಅವಕಾಶವಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರದು ಎಂದು ಉದ್ಯಮಿ ಮಹೇಶ ಶೆಟ್ಟಿ ಹೇಳಿದರು.
ನಗರದ ಜಯದೇವಿ ತಾಯಿ ಬಾಲಿಕೆಯರ ಪ್ರೌಢಶಾಲೆಯ ವಿದ್ಯಾರ್ಥಿ ಸಂಸತ್​ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಪಾಲಿಕೆ ಮಾಜಿ ಮೇಯರ್​ ಈರೇಶ ಅಂಚಟಗೇರಿ ಮಾತನಾಡಿ, ವಿದ್ಯಾರ್ಥಿಯರು ಉನ್ನತ ಗುರಿ ಹೊಂದಿ ಉತ್ತಮ ವ್ಯಾಸಂಗ ಮಾಡಬೇಕು. ಸಂವಿಧಾನದ ಅಡಿ ಅನೇಕ ಸೌಲಭ್ಯಗಳು ಲಭ್ಯವಾಗುವುದರಿಂದ ಸತತ ಪ್ರಯತ್ನದಿಂದ ಜೀವನದಲ್ಲಿ ಯಶಸ್ವಿ ವ್ಯಕ್ತಿಗಳಾಗಬೆಕು ಎಂದರು.
ರವೀಂದ್ರ ಆಕಳವಾಡಿ ಮಾತನಾಡಿ, ವಿದ್ಯಾರ್ಥಿಯರು ತಂತ್ರಜ್ಞಾನದ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸರಳಾ ಮಟ್ಟಿ ಮಾತನಾಡಿ, ಜೀವನದಲ್ಲಿ ಬರುವ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆಯಬೇಕು ಎಂದರು.
ಎಸ್​.ಎಸ್​. ಚಿಕ್ಕಮಠ ಕವನ ವಾಚನ ಮಾಡಿದರು. ಮುಖ್ಯಾಧ್ಯಾಪಕ ಪಿ.ಎಂ. ದೊಡ್ಡಮನಿ ಸ್ವಾಗತಿಸಿದರು. ಎಸ್​.ಎಸ್​. ಚೌಧರಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net