ಧಾರವಾಡ: ಹೊಸತನದ ಹರಿಕಾರ, ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿಯ `ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ'ಯನ್ನು ತಾಲೂಕಿನ ವೀರಾಪೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಗಣ್ಯರು ಬಿಡುಗಡೆಗೊಳಿಸಿದರು.
ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ ಪಡೆದ ವಿದ್ಯಾರ್ಥಿಗಳು, ಅದರಲ್ಲಿನ ವಿಷಯಗಳನ್ನು ಓದಿ ಸಂತಸ ವ್ಯಕ್ತಪಡಿಸಿದರು. ಸಂಚಿಕೆ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್ನ ಇಆರ್ ಹೆಡ್ ಶ್ರೀನಿವಾಸ ಬಾಬು ಮಾತನಾಡಿ, ವಿಆರ್‌ಎಲ್ ಸಮೂಹ ಸಂಸ್ಥೆಯು ಕಡಿಮೆ ದರದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ ಕಲ್ಪಿಸುತ್ತಿರುವುದು ಶ್ಲಾಘನೀಯ. ಈ ಸಂಚಿಕೆಗಳು ವಿದ್ಯಾರ್ಥಿಗಳಿಗೆ ಸಂಗ್ರಹ ಯೋಗ್ಯವಾಗಿವೆ. ವಿದ್ಯಾರ್ಥಿಗಳು ಜೀವನದಲ್ಲಿ ಸ್ಪಷ್ಟ ಗುರಿ ಇಟ್ಟುಕೊಂಡು, ಪರಿಶ್ರಮದೊಂದಿಗೆ ಆ ಗುರಿ ಸಾಽಸಬೇಕು ಎಂದು ಸಲಹೆ ನೀಡಿದರು.
ಟಾಟಾ ಮೋಟಾರ್ಸ್ನ ಬಾಡಿ ಸಲ್ಯೂಷನ್ಸ್ನ ಹಿರಿಯ ವ್ಯವಸ್ಥಾಪಕ, ಇಆರ್ ಸತೀಶ್ ದೇಶಪಾಂಡೆ ಮಾತನಾಡಿ, ವಿಜಯವಾಣಿ ದಿನಪತ್ರಿಕೆ ಉತ್ತಮವಾಗಿ ಮೂಡಿಬರುತ್ತಿದೆ. ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆಯೂ ಮಕ್ಕಳಿಗೆ ಜ್ಞಾನ ವೃದ್ಧಿಗೆ ಸಹಕಾರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಡಾ. ಕೆ. ಪರಿಮಳ ಮಾತನಾಡಿ, ವಿಆರ್‌ಎಲ್ ಸಮೂಹ ಸಂಸ್ಥೆಯು ಕಡಿಮೆ ದರದಲ್ಲೇ ವಿದ್ಯಾರ್ಥಿ ಉದ್ಯೋಗ ಮಿತ್ರ ತಲುಪಿಸುತ್ತಿರುವುದು ನಿಜಕ್ಕೂ ಅಭಿನಂದನೀಯ. ಕೆಎಎಸ್, ಐಎಎಸ್ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುತ್ತಿರುವವರಿಗೆ ಹೇಳಿ ಮಾಡಿಸಿದಂತಿದೆ. ವಿದ್ಯಾರ್ಥಿಗಳು ಇದರ ಅಧ್ಯಯನ ಮಾಡಿ ಜ್ಞಾನ ವೃದ್ಧಿಸಿಕೊಳ್ಳಬೇಕು. ವಿಜಯವಾಣಿ ದಿನಪತ್ರಿಕೆ ಸುದ್ದಿ ಪ್ರಸಾರದ ಜತೆ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಮಾದರಿಯಾಗಿದೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಈರನಗೌಡ ಪಾಟೀಲ, ಶಿಕ್ಷಕರಾದ ಎ.ಎ. ಬೆಣ್ಣಿ, ಉಮಾದೇವಿ ಪಾಟೀಲ, ಸ್ಮೀತಾ ವಡಗಾವಿ, ಸುವರ್ಣಾ ಪಾಟೀಲ ವೇದಿಕೆಯಲ್ಲಿದ್ದರು. ಶಿಕ್ಷಕ ಸುರೇಶ ಮುಗಳಿ ನಿರೂಪಿಸಿದರು. ಪ್ರತಿಭಾ ಪಾಟೀಲ ವಂದಿಸಿದರು.