ಜಿಲ್ಲೆಯಲ್ಲಿ ಐಓಸಿ 13, ಬಿಪಿಸಿ 18, ಎಚ್‌ಪಿಸಿ 22 ಒಟ್ಟು 55 ಗ್ಯಾಸ್ ಡೀಲರ್ಸ್ಗಳಿದ್ದಾರೆ. ಐಓಸಿ, ಬಿಪಿಸಿ, ಎಚ್‌ಪಿಸಿ ಕಂಪನಿಗಳು ಸೇರಿ ಸಿಂಗಲ್ ಗ್ಯಾಸ್ ಕನೆಕ್ಷನ್ 2,83,796 ಮತ್ತು ಡಬಲ್ ಗ್ಯಾಸ್ ಕನೆಕ್ಷನ್ 3,47,265 ಸೇರಿ ಒಟ್ಟು 6,31,061 ಗ್ಯಾಸ್ ಸಂಪರ್ಕಗಳಿವೆ. ವಾಣಿಜ್ಯ ಬಳಕೆಗಾಗಿ 11,799 ವಾಣಿಜ್ಯ ಸಿಲಿಂಡರ್ ಸಂಪರ್ಕಗಳಿವೆ. ಒಟ್ಟಾರೆಯಾಗಿ ಗೃಹಬಳಕೆ ಮತ್ತು ವಾಣಿಜ್ಯ ಬಳಕೆ ಸೇರಿ 6,42,860 ಗ್ಯಾಸ್ ಸಂಪರ್ಕಗಳಿವೆ. ಕಳೆದ 60 ದಿನಗಳ ಸರಾಸರಿಯಂತೆ ಪ್ರತಿದಿನ ಜಿಲ್ಲೆಯಲ್ಲಿ 10,987 ಸಿಲಿಂಡರ್‌ಗಳನ್ನು ವಿತರಿಸಲಾಗುತ್ತಿದೆ ಎಂದರು.