stock market ಷೇರು ಮಾರುಕಟ್ಟೆ ‘ಅರ್ಥ’ ಆಗ್ಬೇಕೇ? ಈ ಮಾತ್ ಕೇಳಿ...

stock market ಹುಬ್ಬಳ್ಳಿಯ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ವಾಣಿಜ್ಯ ಪದವಿ ಕಾಲೇಜ್‌ನಲ್ಲಿ ಗುರುವಾರ ವಿಶೇಷ ಉಪನ್ಯಾಸ ನೀಡಿದ ಸಂಪನ್ಮೂಲ ವ್ಯಕ್ತಿ ಪ್ರೊ. ಶ್ರೀಧರ ಗೋಡಬೋಲೆ ಅವರನ್ನು ಗೌರವಿಸಲಾಯಿತು.
stock market ಹುಬ್ಬಳ್ಳಿಯ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ವಾಣಿಜ್ಯ ಪದವಿ ಕಾಲೇಜ್‌ನಲ್ಲಿ ಗುರುವಾರ ವಿಶೇಷ ಉಪನ್ಯಾಸ ನೀಡಿದ ಸಂಪನ್ಮೂಲ ವ್ಯಕ್ತಿ ಪ್ರೊ. ಶ್ರೀಧರ ಗೋಡಬೋಲೆ ಅವರನ್ನು ಗೌರವಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಷೇರು ಮಾರುಕಟ್ಟೆಯ ಕಾರ್ಯವೈಖರಿ
  • ಬಂಡವಾಳ ಹೂಡಿಕೆ, ಗಳಿಕೆ
ಹುಬ್ಬಳ್ಳಿ: ಇಲ್ಲಿಯ ಹೆಗ್ಗೇರಿಯ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ವಾಣಿಜ್ಯ ಪದವಿ ಕಾಲೇಜ್‌ನಲ್ಲಿ stock market ಷೇರು ಮಾರುಕಟ್ಟೆಯ ಕಾರ್ಯವೈಖರಿ ಮತ್ತು ಬಂಡವಾಳ ಹೂಡಿಕೆ, ಗಳಿಕೆಯ ಕುರಿತು ಒಂದು ದಿನ ಅರಿವು ಮೂಡಿಸುವ ಕಾರ್ಯಕ್ರಮವನ್ನು ಗುರುವಾರ ಏರ್ಪಡಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿ ಪ್ರೊ. ಶ್ರೀಧರ ಗೋಡಬೋಲೆ ಮಾತನಾಡಿ, ಷೇರು ಮಾರುಕಟ್ಟೆಗೆ ಹೋಗುವ ಮುನ್ನ ಅರ್ಥಶಾಸ್ತ್ರೀಯ ಅಧ್ಯಯನ ಅಗತ್ಯ. ಹೂಡಿಕೆ, ಲಾಭ ಮತ್ತು ಗಳಿಕೆಯನ್ನು ಚೆನ್ನಾಗಿ ತಿಳಿದುಕೊಳ್ಳಬೇಕು. ಷೇರು ಮಾರುಕಟ್ಟೆ ಏರಳಿತಗಳ ಅಂದಾಜು ಬಲ್ಲವರು ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದರು.
ಪ್ರಭಾರಿ ಪ್ರಾಚಾರ್ಯ ಪ್ರೊ. ಸಾಜಿದ್ ಹುಸೇನ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಬಸವರಾಜ ಬಳಗಾನೂರ ಪ್ರಾಸ್ತಾವಿಕವಾಗಿ ಮಾತನಡಿದರು. ವಿದ್ಯಾರ್ಥಿಗಳಾದ ಅಮಿತ್ ಮತ್ತು ಸುನಿಲ್ ತಮ್ಮ ಅಭಿಪ್ರಾಯ ಹಂಚಿಕೊಂಡರು.
ದೀಪಶ್ರೀ ಹರಿಹರ ಪ್ರಾರ್ಥಿಸಿದರು. ಪ್ರೊ. ಭಾರತಿ ನಾಡಕರ್ಣಿ ಕಾರ್ಯಕ್ರಮ ನಿರೂಪಿಸಿ, ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಪೂಜಾ ಶೆಟ್ಟಿ ಸ್ವಾಗತಿಸಿ, ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net