ರಾಜ್ಯ ಮಟ್ಟದ (inter college) ಅಂತರ್​ ಕಾಲೇಜು ಸ್ಪರ್ಧೆ

ಹುಬ್ಬಳ್ಳಿಯ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದಲ್ಲಿ ಏರ್ಪಡಿಸಿದ್ದ (inter college) ಎಂತ್ರೇವಾ ರಾಜ್ಯ ಮಟ್ಟದ ಅಂತರ್​ ಕಾಲೇಜು ಸ್ಪರ್ಧೆ ಉದ್ಘಾಟನೆ ಸಮಾರಂಭದಲ್ಲಿ ಮೃಣಾಲ ಬಂಕಾಪುರ, ಡಾ. ಶೋಲ್ಲಾಪುರ, ಆರೋಗ್ಯಸ್ವಾಮಿ ಕರಡಿ, ಡಾ. ಗುರುವಾರ್ಯ ಹಿರೇಮಠ, ಇತರರು ಇದ್ದರು.

Published on
ಹುಬ್ಬಳ್ಳಿ: ಇಲ್ಲಿಯ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗವು (inter college) ರಾಜ್ಯ ಮಟ್ಟದ ಅಂತರ್​ ಕಾಲೇಜು ಸ್ಪರ್ಧೆ ಎಂತ್ರೇವಾ 2025 ಅನ್ನು ಸಂಭ್ರಮದಿಂದ ನಡೆಸಿತು.
ಬಿಎಸ್ಸಿ ಟೆಕ್ಸಟೈಲ್ಸ್​ ಆಡಳಿತಾಧಿಕಾರಿ ಮೃಣಾಲ ಬಂಕಾಪುರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಸ್ತು ಹಾಗೂ ಸಮಯ ಪಾಲನೆಯ ಜತೆಗೆ ಕೆಲವು ಮೂಲ ಗುಣಗಳನ್ನು ಅಳವಡಿಸಿಕೊಳ್ಳುವ ಮೂಲಕ ಯಶಸ್ವಿ ಉದ್ಯಮಿಯಾಗಲು ಸಾಧ್ಯ ಎಂದರು.
ಎಂತ್ರೇವಾ 2025 ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ನವೀನತೆ, ನಾಯಕತ್ವ ಹಾಗೂ ಉದ್ಯಮಶೀಲತೆ ಕೌಶಲಗಳನ್ನು ಬೆಳೆಸುವ ದಿಸೆಯಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಉದ್ಯಮ ಕ್ಷೇತ್ರದ ನಂಟು ಮತ್ತಷ್ಟು ಬಲಪಡಿಸುವಲ್ಲಿ ಇದು ಮಹತ್ವದ ಪಾತ್ರವಹಿಸುತ್ತದೆ ಎಂದರು.
ರಾಜ್ಯದ ವಿವಿಧ ಕಾಲೇಜುಗಳಿಂದ 60 ತಂಡಗಳು ಭಾಗವಹಿಸಿದ್ದವು. ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಲ್ಲಿನ ಉದ್ಯಮಶೀಲತೆ ಹಾಗೂ ಸೃಜನಶೀಲತೆಯು ಸ್ಪಷ್ಟವಾಗಿ ಬಿಂಬಿತವಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net