ರಾಜ್ಯ ಹೆದ್ದಾರಿ 73ರಲ್ಲಿ ಸಂಚಾರ ದುಸ್ತರ State highway

ಧಾರವಾಡ ತಾಲೂಕಿನ ಮುಮ್ಮಿಗಟ್ಟಿಯಿಂದ ಬೈಲಹೊಂಗಲ ಸಂಪಕಿರ್ಸುವ ರಸ್ತೆ
ಧಾರವಾಡ ತಾಲೂಕಿನ ಮುಮ್ಮಿಗಟ್ಟಿಯಿಂದ ಬೈಲಹೊಂಗಲ ಸಂಪಕಿರ್ಸುವ ರಸ್ತೆ
Published on
ಧಾರವಾಡ: ಧಾರವಾಡ- ಬೈಲಹೊಂಗಲ ತಾಲೂಕುಗಳನ್ನು ಸಂಪಕಿರ್ಸುವ ರಾಜ್ಯ ಹೆದ್ದಾರಿ ಸಂಪೂರ್ಣ ಹಾಳಾಗಿದೆ. ಮಳೆಗಾಲ ಮುಗಿದಿದ್ದು, ದುರಸ್ತಿ ಕಾರ್ಯ ನಡೆಸಬೇಕಾದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಮಂಗಸೂಳಿ- ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ 73ರ ದುಸ್ಥಿತಿ ಇದು. ತಾಲೂಕಿನ ಮುಮ್ಮಿಗಟ್ಟಿ ಕ್ರಾಸ್​ನಿಂದ ಗರಗ ಮಾರ್ಗವಾಗಿ ಬೈಲಹೊಂಗಲಕ್ಕೆ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈ ರಸ್ತೆ ಧಾರವಾಡದಿಂದ ಗರಗ, ಹಂಗರಕಿ, ತಡಕೋಡ ಸೇರಿ ಹಲವು ಗ್ರಾಮಗಳಲ್ಲಿ ಸಂಚರಿಸಿ ಬೈಲಹೊಂಗಲ ತಾಲೂಕನ್ನು ಸಂಪಕಿರ್ಸುತ್ತದೆ. ರಾಜ್ಯ ಹೆದ್ದಾರಿ ಎನಿಸಿಕೊಂಡರೂ ಕಳೆದ 2 ವರ್ಷಗಳಿಂದ ದುರಸ್ತಿ ಭಾಗ್ಯ ಕಂಡಿಲ್ಲ.
ಮುಮ್ಮಿಗಟ್ಟಿ ಕ್ರಾಸ್​ನಿಂದ ಗರಗ ರಸ್ತೆಗುಂಟ ಹಲವಾರು ಪ್ರತಿಷ್ಠಿತ ಕೈಗಾರಿಕಾ ಕಂಪನಿಗಳಿವೆ. ಸಾವಿರಾರು ಉದ್ಯೋಗಿಗಳು ಹಗಲು ರಾತ್ರಿ ದ್ವಿಚಕ್ರ ವಾಹನಗಳಲ್ಲಿ ಓಡಾಡುತ್ತಾರೆ. ರಾತ್ರಿ ಪಾಳಿ ಮುಗಿಸಿ ಬೈಕ್​ಗಳಲ್ಲಿ ಹೋಗುವ ಕಾಮಿರ್ಕರು ತಗ್ಗು ಗುಂಡಿಯ ರಸ್ತೆಯಲ್ಲಿ ಬಿದ್ದು, ಗಾಯಗೊಂಡಿದ್ದಾರೆ. ಅಪಘಾತ ಪ್ರಕರಣಗಳಲ್ಲಿ ಪ್ರಾಣಹಾನಿ ಸಂಭವಿಸಿದ ಉದಾಹರಣೆಗಳಿವೆ.
ಅಲ್ಲದೆ, ಈ ರಸ್ತೆಯಲ್ಲಿ ಕೆಲ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿವೆ. ಗರಗ, ತಡಕೋಡ ಗ್ರಾಮಕ್ಕೆ ನಿತ್ಯ ಸಾರಿಗೆ ಬಸ್​ಗಳು ಸಂಚರಿಸುತ್ತವೆ. ಖಾಸಗಿ ವಾಹನಗಳು, ದ್ವಿಚಕ್ರ ವಾಹನ ಸವಾರರು ಇದೇ ಮಾರ್ಗವಾಗಿ ಧಾರವಾಡಕ್ಕೆ ಓಡಾಡುತ್ತಾರೆ. ರಸ್ತೆ ಸಂರ್ಪೂಣ ಹಾಳಾಗಿದ್ದು, ವಾಹನಗಳ ಸಂಚಾರ ದುಸ್ತರವಾಗಿದೆ.
"

ಧಾರವಾಡ ತಾಲೂಕಿನ-- ಮುಮ್ಮಿಗಟ್ಟಿಯಿಂದ ಗರಗ ಮಾರ್ಗವಾಗಿ ಬೈಲಹೊಂಗಲ ಸಂಪಕಿರ್ಸುವ ರಸ್ತೆ ಸಂರ್ಪೂಣ ಹಾಳಾಗಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಕೂಡಲೇ ರಸ್ತೆ ದುರಸ್ತಿ ಕಾರ್ಯ ಆರಂಭಿಸದಿದ್ದರೆ ರಸ್ತೆ ತಡೆ ನಡೆಸಿ ಹೋರಾಟ ನಡೆಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net