ಮೆಕ್ಕೆಜೋಳ (Maize) ಖರೀದಿ ಕೇಂದ್ರ ತೆರಯಬೇಕು ಎಂದು ಆಗ್ರಹಿಸಿ ಕರ್ನಾಟಕ ರೈತ ಸೇನೆ ಹೋರಾಟಗಾರರು ತಹಸೀಲ್ದಾರ್ ಕಚೇರಿ ಸಿಬ್ಬಂದಿ ಗಣೇಶ ಚಳಕೇರಿ ಅವರ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು.
ನವಲಗುಂದ: ಮೆಕ್ಕೆಜೋಳ (Maize) ಖರೀದಿ ಕೇಂದ್ರ ತೆರೆದು ಪ್ರತಿ ಕ್ವಿಂಟಾಲ್ಗೆ 3000ರೂ.ರಂತೆ ಖರೀದಿಸಬೇಕು. ಇಲ್ಲದಿದ್ದರೆ ನ.21 ರಿಂದ ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರೈತ ಸೇನೆ ಹೋರಾಟಗಾರರು ತಹಸೀಲ್ದಾರ್ ಕಚೇರಿ ಸಿಬ್ಬಂದಿ ಗಣೇಶ ಚಳಕೇರಿ ಅವರ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರೈತ ಸೇನಾ ರಾಜ್ಯಾಧ್ಯಕ್ಷ ಶಂಕರ ಅಂಬಲಿ ಮಾತನಾಡಿ, ಈಗಾಗಲೇ ರೈತರು ಗೋವಿನಜೋಳ ಒಕ್ಕಲಿ ಮಾಡಿ ದಾಸ್ತಾನು ಮಾಡಲು ಆಗದೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಕೂಡಲೇ ಸರ್ಕಾರ ರೈತರ ನೆರವಿಗೆ ಬರಬೇಕು. 4 ದಿನದೊಳಗಾಗಿ ಖರೀದಿ ಕೇಂದ್ರ ತೆರೆದು ಪ್ರತಿ ಕ್ವಿಂಟಾಲ್ಗೆ 3 ಸಾವಿರ ರೂ. ರಂತೆ ಖರೀದಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಿರಂತರ ಧರಣಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಈಗಾಗಲೇ ಹೆಸರು ಖರೀದಿ ಕೇಂದ್ರ ತೆರೆದರೂ ಈವರೆಗೂ ಹೆಸರು ಖರೀದಿ ಮಾಡುತ್ತಿಲ್ಲ. ಕೂಡಲೇ ಹೆಸರು ಖರೀದಿ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.