ಕರೀಮ, ಸಮೀರ ಹಾಗೂ ಬಾಷಾ ಸೇರಿ ಇರ್ಷಾದ್ ಮುಲ್ಲಾಗೆ ಚಾಕುವಿನಿಂದ ಇರಿದಿದ್ದಾರೆ. ಶಾ ಬಜಾರ್‌ನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಇರ್ಷಾದ್ ಕಳೆದ ವರ್ಷ ಹೋಟೆಲ್‌ನಲ್ಲಿ 200 ರೂ. ತೆಗೆದುಕೊಂಡಿದ್ದ. ಇದನ್ನು ನೋಡಿದ್ದ ಕರೀಮ, ಮಾಲೀಕರಿಗೆ ವಿಷಯ ಮುಟ್ಟಿಸಿದ್ದ. ಮಾಲೀಕರು, ಇರ್ಷಾದ್‌ನನ್ನು ಕೆಲಸದಿಂದ ತೆಗೆದುಹಾಕಿದ್ದರು. ಕರೀಮ ಭೇಟಿಯಾದಗಲೊಮ್ಮೆ ನೀನು ಮಾಲೀಕರಿಗೆ ಹೇಳಬಾರದಿತ್ತು ಎಂದು ಇರ್ಷಾದ್ ಹೇಳುತ್ತಿದ್ದ. ಇದರಿಂದ ಕುಪಿತಗೊಂಡಿದ್ದ ಕರೀಮ, ಇನ್ನೊಮ್ಮೆ ನನ್ನ ಹತ್ತಿರ ಬಂದು ಇದೇ ವಿಷಯ ಮಾತನಾಡಿದರೆ, ನಿನಗೆ ಬಿಡುವುದಿಲ್ಲ ಎಂದು ಧಮಕಿ ಹಾಕಿದ್ದ. ಬುಧವಾರ ಬೆಳಗ್ಗೆ 3 ಗಂಟೆಗೆ ಕರೀಮನ ಮನೆಗೆ ಹೋದ ಇರ್ಷಾದ್ ಹಣ ತೆಗೆದುಕೊಂಡು ಹೋಗಿದ್ದ ವಿಷಯವನ್ನು ಮತ್ತೆ ಪ್ರಸ್ತಾಪಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದು ಕರೀಮ ಸೇರಿ ಮೂವರು, ಚಾಕುವಿನಿಂದ ಇರ್ಷಾದ್ ಎಡಪಕ್ಕೆ, ಕುತ್ತಿಗೆಗೆ ಇರಿದು ಕೊಲೆಗೆ ಯತ್ನಿಸಿದ್ದಾರೆ ಎಂದು ಇರ್ಷಾದ್ ಅಜ್ಜ ದಾವಲ್‌ಸಾಬ್ ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.