ಹುಬ್ಬಳ್ಳಿ: ಮನೆಯಲ್ಲಿ ಇಣುಕಿ ನೋಡಿದ್ದಕ್ಕೆ ಚಾಕುವಿನಿಂದ (stabbing) ಇರಿತಕ್ಕೀಡಾಗಿದ್ದ ಯುವಕ, ಇಲ್ಲಿಯ ಕೆಎಂಸಿಆರ್‌ಐನಲ್ಲಿ ಮೃತಪಟ್ಟಿದ್ದಾನೆ.
ಎಸ್‌ಎಂ ಕೃಷ್ಣ ನಗರದ ಮನೆಯೊಂದರಲ್ಲಿ ಇಣುಕಿನೋಡಿದ್ದ ಸಲ್ಮಾನ್ ಖಾನ್ ಕಲಾದಗಿಗೆ ಸಿಖಂದರ್ ಶೇಖ್ ಎನ್ನುವಾತ ಚಾಕುವಿನಿಂದ ಇರಿದಿದ್ದ.
ಕೆಎಂಸಿಆರ್‌ಐನಲ್ಲಿ ಸಲ್ಮಾನ್‌ನನ್ನು ಚಿಕಿತ್ಸೆಗೆ ದಾಖಲಿಸಿದ್ದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾನೆ. ಸಿಖಂದರ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.