ಹುಬ್ಬಳ್ಳಿ: ಉಣಕಲ್ ಕೆರೆಯಲ್ಲಿ ಮೀನು ಹಿಡಿಯುವ ವಿಷಯವಾಗಿ ನಡೆದ ಗಲಾಟೆಯಲ್ಲಿ ಯುವಕನೊಬ್ಬನಿಗೆ ಚಾಕುವಿನಿಂದ (stabbing) ಇರಿಯಲಾಗಿದ್ದು, ವಿದ್ಯಾನಗರ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಅಲ್ತಾಫ್ ಮತ್ತವನ ಸ್ನೇಹಿತರು ಸೇರಿ ಇಸ್ಮಾಯಿಲ್ ನದಾಫ್ (22) ಎಂಬಾತನಿಗೆ ಇರಿದಿದ್ದಾರೆ. ಗಾಯಗೊಂಡ ಇಸ್ಮಾಯಿಲ್‌ನನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಮೇ 17ರಂದು ಮಧ್ಯಾಹ್ನ ಮೀನು ಹಿಡಿಯಲು ಇವರೆಲ್ಲರೂ ಹೋಗಿದ್ದರು. ಮೀನಿನ ಗಾಳದ ದಾರ ದಾಟುವ ಸಂಬಂಧ ಜಗಳವಾಗಿ ಇಸ್ಮಾಯಿಲ್ ಕುತ್ತಿಗೆ ಹತ್ತಿರ ಚಾಕುವಿನಿಂದ ಇರಿಯಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.