stabbing ಚಾಕುವಿನಿಂದ ಇರಿದು ಕೊಲೆಗೆ ಯತ್ನ

stabbing ಕಸಬಾಪೇಟ ಪೊಲೀಸ್ ಠಾಣೆ
stabbing ಕಸಬಾಪೇಟ ಪೊಲೀಸ್ ಠಾಣೆ
Published on
ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಅಪರಿಚಿತರಿಬ್ಬರು ವ್ಯಕ್ತಿಯೊಬ್ಬರಿಗೆ ಸೋಡಾ ಬಾಟಲ್ನಿಂದ stabbing ಹಲ್ಲೆ ಮಾಡಿ, ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ನಗರದ ಚನ್ನಪೇಟೆಯ ರೇಣುಕಾ ಬಾರ್‌ನಲ್ಲಿ ನಡೆದಿದೆ.
ಕರ್ಕಿ ಬಸವೇಶ್ವರ ನಗರದ ಪರಶುರಾಮ ಕಿಮಕೇರಿ(40) ಮೇಲೆ ಅಪರಿಚಿತರು ಹಲ್ಲೆ ನಡೆಸಿದ್ದಾರೆ. ಬಾರ್‌ನಲ್ಲಿ ಜಾಗ ಬಿಡು ಎಂಬ ಕಾರಣಕ್ಕೆ ಪರಶುರಾಮ ಅವರೊಂದಿಗೆ ಇಬ್ಬರು ಅಪರಿಚಿತರು ಜಗಳ ತೆಗೆದಿದ್ದಾರೆ. ಈ ವೇಳೆ ಅವಾಚ್ಯವಾಗಿ ನಿಂದಿಸಿ ಸೋಡಾ ಬಾಟಲ್ನಿಂದ ಹಲ್ಲೆ ಮಾಡಿದ್ದಾರೆ. ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾರೆ ಎಂದು ಪರಶುರಾಮ ದೂರಿನಲ್ಲಿ ತಿಳಿಸಿದ್ದಾರೆ. ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net