ಹುಬ್ಬಳ್ಳಿ: ಕೆನಡಾದ ಮಾಂಟ್ರಿಯಲ್‌ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಅಮೆರಿಕನ್ ಸೊಸೈಟಿ ಆಫ್ ರೆಟಿನಲ್ ಸ್ಪೆಷಲಿಸ್ಟ್ಸ್ (ಎಎಸ್‌ಆರ್‌ಎಸ್) ವಾರ್ಷಿಕ ಸಮ್ಮೇಳನದಲ್ಲಿ ಅತ್ಯುತ್ತಮ ಶಸ್ತ್ರಚಿಕಿತ್ಸಾ ವಿಡಿಯೋ ಪ್ರದರ್ಶನಕ್ಕಾಗಿ ಇಲ್ಲಿಯ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಶ್ರೀನಿವಾಸ ಜೋಶಿ srinivas joshi ಅವರು‘ರೇಟ್-ಬಕ್ಲರ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದನ್ನು ರೆಟಿನಲ್ ಶಸ್ತ್ರಚಿಕಿತ್ಸೆಯ ‘ಆಸ್ಕರ್’ ಎಂದು ಕೂಡ ಕರೆಯಲಾಗುತ್ತದೆ.