ನೈಋತ್ಯ ರೈಲ್ವೆ ಎಜಿಎಂ ಆಗಿ ಶ್ರೀನಿವಾಸ ಅಧಿಕಾರ railway

railway
railway
Published on

ಪ್ರಮುಖ ಮುಖ್ಯಾಂಶಗಳು

  • ಮೂಲಸೌಕರ್ಯ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಾರೆ.
  • ದಕ್ಷಿಣ ಮಧ್ಯ ರೈಲ್ವೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ನಿಯೋಜನೆಗೊಂಡರು.
  • ಮುಖ್ಯ ಆಡಳಿತಾಧಿಕಾರಿಯಾಗಿ (ನಿಮಾಣ) ಕಾರ್ಯನಿರ್ವಹಿಸುತ್ತಿದ್ದರು.
ಹುಬ್ಬಳ್ಳಿ :
1989ರ ಬ್ಯಾಚ್​ನ ಇಂಡಿಯನ್ ರೈಲ್ವೆ ಸರ್ವಿಸ್ ಇಂಜಿನಿಯರ್ಸ್ ಅಧಿಕಾರಿಯಾದ ಎ.ಜಿ. ಶ್ರೀನಿವಾಸ, 1991ರ ಜನವರಿ 7ರಂದು ಪುಣೆಯ ಐಆರ್​ಐಸಿಇಎನ್​ನಲ್ಲಿ ಪ್ರೊಬೆಷನರಿ ತರಬೇತುದಾರರಾಗಿ ಭಾರತೀಯ ರೈಲ್ವೆ ಸೇವೆಗೆ ಸೇರಿದರು.
ತರಬೇತಿ ಪೂರ್ಣಗೊಂಡ ನಂತರ, 1993ರ ಜನವರಿ 8ರಂದು ದಕ್ಷಿಣ ಮಧ್ಯ ರೈಲ್ವೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ನಿಯೋಜನೆಗೊಂಡರು.
ಅವರು ದಕ್ಷಿಣ ಮಧ್ಯ ರೈಲ್ವೆ, ನೈಋತ್ಯ ರೈಲ್ವೆ ಮತ್ತು ದಕ್ಷಿಣ ರೈಲ್ವೆ ವಲಯಗಳಲ್ಲಿ ವಿವಿಧ ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.
ಮೇ 2000 ರಲ್ಲಿ ಜೂನಿಯರ್ ಅಡ್ಮಿನಿಸ್ಟ್ರೇಟಿವ್ ಗ್ರೇಡ್ ಗೆ ಬಡ್ತಿ ಪಡೆದ ಅವರು, ಹುಬ್ಬಳ್ಳಿ ಮತ್ತು ತಿರುಪತಿಯಲ್ಲಿ ಸೇವೆ ಸಲ್ಲಿದ್ದಾರೆ. ಸೆಲೆಕ್ಷನ್ ಗ್ರೇಡ್​ಗೆ ಉನ್ನತೀಕರಿಸಲ್ಪಟ್ಟ ಅವರು, ತಿರುಪತಿ, ಗುಂತಕಲ್, ರಾಯಚೂರು ಹಾಗೂ ದಕ್ಷಿಣ ಮಧ್ಯ ರೈಲ್ವೆ ಪ್ರಧಾನ ಕಚೇರಿಯಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಮೂರು ದಶಕಗಳಿಗೂ ಹೆಚ್ಚು ಕಾಲದ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಎ.ಜಿ. ಶ್ರೀನಿವಾಶ ಅವರು ಸುಮಾರು 500 ಕಿಲೋಮೀಟರ್ ರೈಲು ಮಾರ್ಗಗಳ ಉದ್ಘಾಟನೆ ಹಾಗೂ ಹಲವು ರೈಲು ನಿಲ್ದಾಣಗಳ ಪುನರಾಭಿವೃದ್ಧಿ ಸೇರಿದಂತೆ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಾರೆ.
ಈಗಿನ ಹುದ್ದೆಯನ್ನು ವಹಿಸಿಕೊಳ್ಳುವ ಮುನ್ನ, ಅವರು ನವೆಂಬರ್ 2023 ರಿಂದ ಭುವನೇಶ್ವರದಲ್ಲಿ ಮುಖ್ಯ ಆಡಳಿತಾಧಿಕಾರಿಯಾಗಿ (ನಿಮಾಣ) ಕಾರ್ಯನಿರ್ವಹಿಸುತ್ತಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net