srikrishna janmastami ಅದ್ದೂರಿ ಶ್ರೀಕೃಷ್ಣ ಜನ್ಮಾಷ್ಟಮಿ

srikrishna janmastami ಹುಬ್ಬಳ್ಳಿಯಲ್ಲಿ ಶನಿವಾರ ಏರ್ಪಡಿಸಿದ್ದ ಮೊಸರಿನ ಗಡಿಗೆ ಒಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ತಂಡ.
srikrishna janmastami ಹುಬ್ಬಳ್ಳಿಯಲ್ಲಿ ಶನಿವಾರ ಏರ್ಪಡಿಸಿದ್ದ ಮೊಸರಿನ ಗಡಿಗೆ ಒಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ತಂಡ.
Published on
ಹುಬ್ಬಳ್ಳಿ: ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಶ್ರೀ ಕೃಷ್ಣ ಜನ್ಮಾಷ್ಟಮಿ srikrishna janmastami ಉತ್ಸವ ಸಮಿತಿ ವತಿಯಿಂದ ಇಲ್ಲಿಯ ಗೋಕುಲ ರೋಡ್ ಅಕ್ಷಯ ಪಾರ್ಕ್‌ನ ಸಂತೆ ಮೈದಾನದಲ್ಲಿ ಶನಿವಾರ ಮೊಸರಿನ ಗಡಿಗೆ ಒಡೆಯುವ ಸ್ಪರ್ಧೆಯು ವಿಜೃಂಭಣೆಯಿಂದ ಜರುಗಿತು.
ಇದಕ್ಕೂ ಮೊದಲು ಚೈತನ್ಯ ನಗರದ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಿಂದ ಮೊಸರಿನ ಗಡಿಗೆ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಮೆರವಣಿಗೆಯಲ್ಲಿ ಗೊಂಬೆ ಕುಣಿತ, ಜಗ್ಗಲಗಿ ತಂಡ, ಡೊಳ್ಳು, ಆನೆ, ಶ್ರೀಕೃಷ್ಣನ ರಥದ ಮಾದರಿ ಪಾಲ್ಗೊಂಡಿದ್ದವು.
ನಂತರ ನಡೆದ ಕಾರ್ಯಕ್ರಮವನ್ನು ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸಿದರು.
ಮುಖಂಡರಾದ ಗೋವಿಂದ ಜೋಶಿ, ಕೃಷ್ಣ ಗಂಡಗಾಳೇಕರ, ಕಿರಣ ಭರಾಡೆ, ಗುರುನಾಥ ಮುರಗೋಡ, ಸುದೀರ ಹೊಸಮನಿ, ಅಜಯ ಭರಾಡೆ, ಗಿರೀಶ ಹಳ್ಯಾಳಕರ, ವಿರೂಪಾಕ್ಷಯ್ಯ ಹಿರೇಮಠ, ಶಂಕರಾಚಾರ್ಯ ಪುರೋಹಿತ, ಕುಮಾರ ಚೌಡಿಮಠ, ಮಲ್ಲಿಕಾರ್ಜುನ ಕುಂಬಾರ ಇತರರು ಭಾಗವಹಿಸಿದ್ದರು.
ಸ್ಪರ್ಧೆಯಲ್ಲಿ ನಗರದ 11 ತಂಡಗಳು ಭಾಗವಹಿಸಿದ್ದವು. ಹೊಸೂರಿನ ವಿಎಂಸಿಸಿ ತಂಡ ಪ್ರಥಮ ಸ್ಥಾನ ಪಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net