ಧಾರವಾಡ: ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಜಾಗೃತ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ ಅಂಗವಾಗಿ ಏ. 1ರಂದು ಗುಗ್ಗಳ, 2ರಂದು ಮಹಾರಥೋತ್ಸವ ನಡೆಯಲಿದೆ. ಗುಗ್ಗಳ ಕಾರ್ಯಕ್ರಮ ಮಾಡಿಸುವವರು ಮಾ. 30ರೊಳಗೆ ನಿಗದಿತ ಹಣ ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಬೇಕು. ಏ. 2ರಂದು ಸಂಜೆ 5.30ಕ್ಕೆ ಜಾಗತ ವೀರಭದ್ರೇಶ್ವರ ಮಹಾರಥೋತ್ಸವವು ಬ್ರಹ್ಮ ಚೆತನ್ಯಾಶ್ರಮದ ದತ್ತಾವಧೂತ ಮಹಾರಾಜರ ಅಧ್ಯತೆಯಲ್ಲಿ ಶಿವಾನಂದ ಮಠದ ಬ್ರಹ್ಮಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿದೆ. ಏ. 3ರಂದು ಕಡುಬಿನ ಕಾಳಗ ನಡೆಯಲಿದೆ.