sri raam finance ಹುಬ್ಬಳ್ಳಿಯ ಶ್ರೀ ವಿದ್ಯಾಧಿರಾಜ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಅಖಿಲ ಭಾರತ ವಿದ್ಯಾರ್ಥಿ ವೇತನ ವಿತರಣೆ ಹಾಗೂ ನವಗತಿ (ಸಾರಥಿ ಸಂಗಮ) ಕಾರ್ಯಕ್ರಮದಲ್ಲಿ ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಮಾತನಾಡಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅಭಿಪ್ರಾಯ
ಹುಬ್ಬಳ್ಳಿ:
ಆರ್ಥಿಕ ಶಿಸ್ತು ಅಳವಡಿಸಿಕೊಂಡರೆ ಲಾಜಿಸ್ಟಿಕ್ಸ್ ಮತ್ತು ಫೈನಾನ್ಸ್ sri raam finance ಕಂಪನಿಗಳು ಏಳಿಗೆಯಾಗಲು ಸಾಧ್ಯ ಎಂದು ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಅಭಿಪ್ರಾಯಪಟ್ಟರು.
ಶ್ರೀರಾಮ ಫೈನಾನ್ಸ್ ಲಿಮಿಟೆಡ್ ವತಿಯಿಂದ ಸಿಎಸ್‌ಆರ್ ಅನುದಾನಡಿ ಇಲ್ಲಿಯ ಎಪಿಎಂಸಿ ಎದುರಿನ ಶ್ರೀ ವಿದ್ಯಾಧಿರಾಜ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಅಖಿಲ ಭಾರತ ವಿದ್ಯಾರ್ಥಿ ವೇತನ ವಿತರಣೆ ಹಾಗೂ ನವಗತಿ (ಸಾರಥಿ ಸಂಗಮ) ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೊದಲು ಚಿಕ್ಕ ಫೈನಾನ್ಸ್ ಕಂಪನಿಯಾಗಿ ಆರಂಭವಾದ ಶ್ರೀರಾಮ ಫೈನಾನ್ಸ್ ಈಗ ದೇಶದಲ್ಲಿಯೇ ನಂ. 1 ಆಗಿದೆ. ಇದಕ್ಕೆಲ್ಲ ಆರ್ಥಿಕ ಶಿಸ್ತು ಪಾಲನೆ, ನೂತನ ತಂತ್ರಜ್ಞಾನ ಅಳವಡಿಕೆ, ವಿಭಿನ್ನ ವಿಚಾರಧಾರೆಗಳು ಕಾರಣ. ಮೊದಲು ಫೈನಾನ್ಸ್ ಆರಂಭಿಸಿ ಈಗ ವಿವಿಧ ಲೋನ್‌ಗಳನ್ನು ನೀಡಲಾಗುತ್ತಿದೆ. ಜತೆಗೆ ಇನ್ಶೂರೆನ್ಸ್ ಕೂಡ ಕೊಡಲಾಗುತ್ತಿದೆ. ಗ್ರಾಹಕರನ್ನು ಆಕರ್ಷಿಸುವ ಕಲೆ ಶ್ರೀರಾಮ ಫೈನಾನ್ಸ್‌ನವರಿಗೆ ಗೊತ್ತಿದೆ ಎಂದು ವಿವರಿಸಿದರು.
ಫೈನಾನ್ಸ್ ಸ್ಥಾಪಕ ಟಿ. ತ್ಯಾಗರಾಜನ್ ಅವರ ಜತೆಗಿನ ಒಡನಾಟ ಸ್ಮರಿಸಿದ ಡಾ. ವಿಜಯ ಸಂಕೇಶ್ವರ ಅವರು, ಮ್ಯಾನೇಜರ್ ಮಾತಿಗೆ ಒಪ್ಪಿ ತ್ಯಾಗರಾಜನ್ ಅವರನ್ನು ಭೇಟಿ ಮಾಡಿದೆ. ನಾನು ಲಾಜಿಸ್ಟಿಕ್ಸ್ ಆರಂಭಿಸಿದ್ದರಿಂದ ಲೋನ್ ಕೊಡಲು ಒಪ್ಪಿದರು. ಆಗ 50 ವಾಹನಗಳನ್ನು ಖರೀದಿಸಿದ್ದೆ. ನಮ್ಮ ಕಂಪನಿಗೂ ಈಗ 50 ವರ್ಷ, ಶ್ರೀರಾಮ ಫೈನಾನ್ಸ್‌ಗೂ 50 ವರ್ಷವಾಗಿದೆ. ಈ ಮಟ್ಟಕ್ಕೆ ಕಂಪನಿಗಳು ಬೆಳೆಯಲು ಮಾಲೀಕರಷ್ಟೇ ಅಲ್ಲ, ಸಿಬ್ಬಂದಿಯೂ ಕಾರಣೀಭೂತರು ಎಂದು ಸ್ಮರಿಸಿದರು.
ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಮಾತನಾಡಿ, ವಾಹನ ಖರೀದಿಯಷ್ಟೇ ಅಲ್ಲ, ಇತರ ವ್ಯವಹಾರಕ್ಕೂ ಶ್ರೀರಾಮ ಫೈನಾನ್ಸ್ ಸಾಲ ನೀಡುತ್ತಿದೆ. ಶಿಸ್ತು ಮತ್ತು ಪರಿಶ್ರಮದಿಂದ ಈ ಕಂಪನಿ ರಾಷ್ಟ್ರಮಟ್ಟದಲ್ಲಿಯೇ ಹೆಸರು ಮಾಡಿದೆ. ತಮ್ಮ ಕಂಪನಿಯಷ್ಟೇ ಅಲ್ಲ, ಕಂಪನಿಗೆ ಶ್ರಮಿಸಿದವರನ್ನೂ ಸಂರಕ್ಷಿಸುತ್ತಿದೆ ಎಂದರು.
ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಡುತ್ತಿರುವುದು ಒಳ್ಳೆಯ ಬೆಳವಣಿಗೆ. ಏನಾದರೊಂದು ಹೊಸ ಕಂಪನಿ, ಸ್ಟಾರ್ಟ್‌ಅಪ್ ಮಾಡಲು ಉತ್ಸಾಹ ತೋರುವ ಯುವಕರಿಗೂ ಪ್ರೋತ್ಸಾಹಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಯುವಕರಿಗಾಗಿ ಬಹಳಷ್ಟು ಯೋಜನೆಗಳನ್ನು ತಂದಿದ್ದಾರೆ. ಯುವಕರು ಇಂಥ ಫೈನಾನ್ಸ್ ಕಂಪನಿಯ ನೆರವು ಪಡೆದು ಉದ್ಯೋಗದಾತರಾಗುವಂತೆ ಸಲಹೆ ನೀಡಿದರು.
ಶ್ರೀರಾಮ ಫೈನಾನ್ಸ್ ಸಿಒಒ ಸುದರ್ಶನಹೊಳ್ಳ ಬಲ್ನಾಡ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸಂಸ್ಥೆ ಆರಂಭವಾಗಿ 50 ವರ್ಷವಾಗಿದೆ. ಕಂಪನಿಯ ಏಳಿಗೆಗೆ ಶ್ರಮಿಸಿದವರ ಅಭಿವೃದ್ಧಿಯನ್ನೂ ಬಯಸುತ್ತಿದೆ. ಹಾಗಾಗಿಯೇ ಸಮಾಜಮುಖಿ ಕಾರ್ಯಕ್ರಮಗಳನ್ನು ಸಿಎಸ್‌ಆರ್ ಅನುದಾಡಿ ನಡೆಸುತ್ತಿದೆ ಎಂದರು.
ಒಟ್ಟು 1600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ವಿತರಿಸಲಾಯಿತು. ಜಯಪ್ರಿಯ ಆಸ್ಪತ್ರೆಯ ವೈದ್ಯರಾದ ಡಾ. ವೆಂಕಟರಾಮ್ ಕಟ್ಟಿ, ಡಾ. ಪ್ರಿಯಾ ಕಟ್ಟಿ ಅವರನ್ನು ಸನ್ಮಾನಿಸಲಾಯಿತು.
ಶ್ರೀರಾಮ ಗ್ರೀನ್ ಫೈನಾನ್ಸ್ ರಾಷ್ಟ್ರೀಯ ಮುಖ್ಯಸ್ಥ ನಂದಗೋಪಾಲ, ಇಡಿ ಶ್ರೀಧರ ಮಠ, ಜೋನಲ್ ಸೇಲ್ಸ್ ಮುಖ್ಯಸ್ಥ ಶಿವಾನಂದ ಸವದತ್ತಿ ಇತರರಿದ್ದರು.