ಆಕಾಶದ ಆಕಾರ ಚಂದಾತಲೇ ಪ್ರಭು ಪರಾಕ್​

ಶ್ರೀ ಮೈಲಾರಲಿಂಗ ದೇವಸ್ಥಾನದ ಕಾರಣಿಕ
ಶ್ರೀ ಮೈಲಾರಲಿಂಗ ದೇವಸ್ಥಾನದ ಕಾರಣಿಕ
Published on
ಧಾರವಾಡ: ನಗರದ ವಿದ್ಯಾಗಿರಿಯ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ 60ನೇ ಜಾತ್ರಾ ಮಹೋತ್ಸವ ಹಾಗೂ ಕಾಣಿರ್ಕೋತ್ಸವ ಭಾನುವಾರ ಜರುಗಿತು. ಶ್ರೀ ಮೈಲಾರಲಿಂಗ ದೇವಸ್ಥಾನದ ವಂಶ ಪಾರಂಪರಿಕ ಕಾಣಿ ಪುರುಷ ಶ್ರೀ ಸಿರಿಮಲ್ಲ ತಿಪ್ಪಣ್ಣ ಶಿರೋಳ ಅವರು "ಆಕಾಶದ ಆಕಾರ ಚಂದಾತಲೇ ಪ್ರಭು ಪರಾಕ್​' ಎಂದು ಕಾಣಿನುಡಿದರು.
ಕಾಣಿನುಡಿಯಂತೆ ಮುಂಬರುವ ದಿನಗಳಲ್ಲಿ ಮಳೆ- ಬೆಳೆ ಚೆನ್ನಾಗಿ ಆಗಲಿದೆ. ರಾಜಕೀಯದಲ್ಲಿ ತುಸು ಭಿನ್ನಾಭಿಪ್ರಾಯ ಕಂಡು ಬಂದರೂ ಸರ್ಕಾರ ಜನರ ಹಿತಾಸಕ್ತಿಗೆ ಪೂರಕವಾಗಿರಲಿದೆ ಎಂದು ವಿಶ್ಲೇಷಿಸಲಾಗಿದೆ.
ಜಾತ್ರಾ ಮಹೋತ್ಸವದಲ್ಲಿ ಮಹಾಭಿಷೇಕ, ಬಿಲ್ಲು ಪೂಜೆ, ಭಜನೆ, ಜಾಗರಣೆ, ಪಲ್ಲಕ್ಕಿ ಉತ್ಸವ, ಕಾಣಿ ಸೇವೆ, ಸರಪಳಿ ಸೇವೆ ವಿಜಂಭಣೆಯಿಂದ ಜರುಗಿದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net