Sports: ನವಲಗುಂದ ಸಂಸದ ಕ್ರೀಡಾಕೂಟ ಇಂದಿನಿಂದ

ನವಲಗುಂದ ಪಟ್ಟಣದ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ಸಂಸದರ ಕ್ರೀಡಾ ಮಹೋತ್ಸವಕ್ಕೆ ಸಿದ್ಧತೆ ನಡೆದಿರುವುದು. ಗಂಗಪ್ಪ ಮನಮಿ, ಸಾಯಿಬಾಬಾ ಆನೆಗುಂದಿ, ನಿಂಗಪ್ಪ ಬಾರಕೇರ, ಪವನ ಪಾಟೀಲ, ಪ್ರಭು ಇಬ್ರಾಹಿಂಪುರ ಇತರರಿದ್ದರು.
ನವಲಗುಂದ ಪಟ್ಟಣದ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ಸಂಸದರ ಕ್ರೀಡಾ ಮಹೋತ್ಸವಕ್ಕೆ ಸಿದ್ಧತೆ ನಡೆದಿರುವುದು. ಗಂಗಪ್ಪ ಮನಮಿ, ಸಾಯಿಬಾಬಾ ಆನೆಗುಂದಿ, ನಿಂಗಪ್ಪ ಬಾರಕೇರ, ಪವನ ಪಾಟೀಲ, ಪ್ರಭು ಇಬ್ರಾಹಿಂಪುರ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ನವಲಗುಂದ
ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿಯ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ದೃಷ್ಟಿಯಿಂದ ಕೇಂದ್ರ ಸಚಿವ ಮತ್ತು ಸಂಸದ ಪ್ರಲ್ಹಾದ ಜೋಶಿ ಪ್ರಸ್ತುತ ಪಡಿಸುವ ಧಾರವಾಡ ಸಂಸದ ಕ್ರೀಡಾಕೂಟ ಪಟ್ಟಣದ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ಜ. 8 ಮತ್ತು 9 ರಂದು ಆಯೋಜಿಸಲಾಗಿದೆ ಎಂದು ಮಂಡಳ ಅಧ್ಯಕ್ಷ ಗಂಗಪ್ಪ ಮನಮಿ ಹೇಳಿದರು.
ನವಲಗುಂದ ಪಟ್ಟಣದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕ್ರೀಡಾ ಮಹೋತ್ಸವಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬೆಳಗ್ಗೆ 10 ಗಂಟೆಗೆ ಚಾಲನೆ ನೀಡುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಸಚಿವರಾದ ಸಿ.ಸಿ. ಪಾಟೀಲ, ಶಂಕರ ಪಾಟೀಲ ಮುನೇನಕೊಪ್ಪ, ಕೆ.ಎನ್. ಗಡ್ಡಿ, ಮಾಜಿ ಶಾಸಕ ಆರ್.ಬಿ. ಶಿರಿಯಣ್ಣವರ ಮುಂತಾದವರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಷಣ್ಮುಖ ಗುರಿಕಾರ, ಬಿಜೆಪಿ ಹುಬ್ಬಳ್ಳಿ ಮಂಡಳದ ಅಧ್ಯಕ್ಷ ಮಂಜುನಾಥ ಗಣಿ, ಬಿಜೆಪಿ ಮುಖಂಡರಾದ ಸಿದ್ದನಗೌಡ ಪಾಟೀಲ, ಸಂತೋಷ ಜೀವಗೌಡರ, ದೇವರಾಜ ದಾಡಿಬಾವಿ, ಸಾಯಿಬಾಬಾ ಆನೆಗುಂದಿ, ಸುರೇಶ ಗಾಣಿಗೇರ, ಬಿ.ಬಿ. ಗಂಗಾಧರ ಮಠ, ಶ್ರೀಶೈಲ ಮೂಲಿಮನಿ, ನಿಂಗಪ್ಪ ಬಾರಕೇರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net