ಭಾರತದ ರಾಜಕಾರಣದಲ್ಲಿ ಆಗಬೇಕಾದ ಬದಲಾವಣೆಗಳು ವಿಷಯದ ಕುರಿತು ಪ್ರಬಂಧ ಸ್ಪರ್ಧೆ ನಡೆಯಲಿದ್ದು, 1000 ರಿಂದ 1,200 ಪದಗಳ ಮಿತಿಯಲ್ಲಿ ತಮ್ಮ ಅಭಿಪ್ರಾಯವನ್ನು ಕನ್ನಡದಲ್ಲಿ ಬರೆಯಬೇಕು. ವಿಜೇತರಿಗೆ ಪ್ರಥಮ 10 ಸಾವಿರ ರೂ., ದ್ವಿತೀಯ 5 ಸಾವಿರ ರೂ., ತೃತೀಯ ಬಹುಮಾನ 3 ಸಾವಿರ ರೂ. ಹಾಗೂ ಐದು ಉತ್ತಮ ಸ್ಪರ್ಧಾರ್ಥಿಗಳಿಗೆ ತಲಾ 1 ಸಾವಿರ ರೂ. ಬಹುಮಾನ ನೀಡಲಾಗುವುದು. 18ರಿಂದ 35 ವರ್ಷದವರು ಭಾಗವಹಿಸಬಹುದು. ನೋಂದಣಿಗೆ ಮಾ. 3 ಕೊನೆಯ ದಿನವಾಗಿದ್ದು, ಸಂಘವನ್ನು ಸಂಪರ್ಕಿಸಬಹುದು ಎಂದರು.