ಹುಬ್ಬಳ್ಳಿ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಹುಬ್ಬಳ್ಳಿ ಶಾಖೆ, ಯೋಗ (YOGA ) ಸ್ಪರ್ಶ ಪ್ರತಿಷ್ಠಾನ ವತಿಯಿಂದ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಜೂನ್ 21ರಂದು ಹುಬ್ಬಳ್ಳಿಯ ಇಂದಿರಾ ಗ್ಲಾಸ್‌ಹೌಸ್‌ನಲ್ಲಿ ವಿಶ್ವ ಯೋಗ ದಿನಾಚರಣೆ ಆಯೋಜಿಸಲಾಗಿದೆ. ಇದರ ಅಂಗವಾಗಿ ಪತಂಜಲಿ ಹಾಗೂ ಯೋಗಸ್ಪರ್ಶ ಪ್ರತಿಷ್ಠಾನದ ವತಿಯಿಂದ ಜೂನ್ 12ರಿಂದ ವಿಶೇಷ ಯೋಗ ತರಗತಿಗಳನ್ನು ನಗರದ ವಿವಿಧ ಬಡಾವಣೆಗಳಲ್ಲಿ ಆಯೋಜಿಸಲಾಗಿದೆ. ಬಡಾವಣೆಗಳಲ್ಲಿ 27 ಶಾಖೆಗಳ ಮುಖಾಂತರ ಉಚಿತವಾಗಿ ಯೋಗ ವಿದ್ಯೆಯನ್ನು ಕಲಿಸುವುದರ ಜತೆಗೆ ವಿವಿಧ ಯೋಗ ಚಿಕಿತ್ಸಾ ಕಾರ್ಯಾಗಾರಗಳು, ಶಿಬಿರಗಳನ್ನು ನಡೆಸಲಾಗುತ್ತಿದೆ.