ಮತದಾರರ ನೋಂದಣಿ ವಿಶೇಷ ಆಂದೋಲನ ಸೆ.19, 20ರಂದು

ಜಿಲ್ಲಾಧಿಕಾರಿ ಸ್ನೇಹಲ್ ಆರ್.
ಜಿಲ್ಲಾಧಿಕಾರಿ ಸ್ನೇಹಲ್ ಆರ್.
Published on
ಧಾರವಾಡ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್​ಐಆರ್​) ಕಾರ್ಯ ಕೈಗೊಳ್ಳಲಾಗಿದ್ದು, ಸೆ. 19 ಮತ್ತು 20ರಂದು ಮತದಾರರ ನೋಂದಣಿ ಕುರಿತು ವಿಶೇಷ ಆಂದೋಲನ ನಡೆಸಲಾಗುವುದು. ಎಲ್ಲ ಮತಗಟ್ಟೆಯಲ್ಲಿ ಬಿಎಲ್​ಓ ಹಾಗೂ ಬಿಎಲ್​ಎ ಹಾಜರಿರಲಿದ್ದು, ಸಾರ್ವಜನಿಕರು ಆಂದೋಲನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್​ ಆರ್​. ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿದ್ದ ಒಟ್ಟು 16,21,961 ಮತದಾರರ ಪೈಕಿ 13,53,946 ಮತದಾರರ (ಶೇ. 83.48) ಮಾಹಿತಿ ಪರಿಶೀಲಿಸಿ, ಕರಡು ಪಟ್ಟಿಗೆ ತರಲಾಗಿದೆ. ಪರಿಶೀಲನೆ ಸಂದರ್ಭದಲ್ಲಿ ಗೈರು, ವಲಸೆ, ಮರಣ, ದ್ವಿಪ್ರತಿ, ಇತರೆ ವರ್ಗಕ್ಕೆ ಸೇರಿದ ಒಟ್ಟು 2,68,015 (ಎಎಸ್​ಎಸ್​ಡಿಒ) ಮತದಾರರನ್ನು ಗುರುತಿಸಲಾಗಿದೆ. ಈ ಪೈಕಿ ನವಲಗುಂದದಲ್ಲಿ 22,628, ಕುಂದಗೋಳದಲ್ಲಿ 19,078, ಧಾರವಾಡದಲ್ಲಿ 32,007, ಹುಬ್ಬಳ್ಳಿ-ಧಾರವಾಡ ಪೂರ್ವದಲ್ಲಿ 47,034, ಹುಬ್ಬಳ್ಳಿ-ಧಾರವಾಡ ಕೇಂದ್ರದಲ್ಲಿ 65,844, ಹುಬ್ಬಳ್ಳಿ-ಧಾರವಾಡ ಪಶ್ಚಿಮದಲ್ಲಿ 64,623 ಹಾಗೂ ಕಲಟಗಿಯಲ್ಲಿ 16,801 ಮತದಾರರನ್ನು ಗುರುತಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಜುಲೈ 16ರಿಂದ ಸೆ. 15ರವರೆಗೆ ನಮೂನೆ 6, 7 ಮತ್ತು ನಮೂನೆ 8 ಅಜಿರ್ ಸೇರಿ 51,172 ಅಜಿರ್ಗಳು ಸ್ವೀಕೃತವಾಗಿವೆ. ಈ ಪೈಕಿ ನವಲಗುಂದದಲ್ಲಿ 3,681, ಕುಂದಗೋಳದಲ್ಲಿ 3,689, ಧಾರವಾಡದಲ್ಲಿ 8,637, ಹು-ಧಾ ಪೂರ್ವದಲ್ಲಿ 9,582, ಹುಬ್ಬಳ್ಳಿ-ಧಾರವಾಡ ಕೇಂದ್ರದಲ್ಲಿ 10,310, ಹುಬ್ಬಳ್ಳಿ&ಧಾರವಾಡ ಪಶ್ಚಿಮದಲ್ಲಿ 10,962, ಕಲಟಗಿಯಲ್ಲಿ 4,311 ಅಜಿರ್ಗಳು ಸ್ವೀಕೃತತವಾಗಿವೆ ಎಂದು ವಿವರಿಸಿದರು.
ಯುವ ಮತದಾರರ ವಿವರ:
ಜಿಲ್ಲೆಯಲ್ಲಿ ಸೆ.16ರವರೆಗೆ ಒಟ್ಟು 7,941 ಯುವ ಮತದಾರರು ಸೇರ್ಪಡೆಗೊಂಡಿದ್ದಾರೆ. ನವಲಗುಂದ 1,159, ಕುಂದಗೋಳ 937, ಧಾರವಾಡ 1,174, ಹುಬ್ಬಳ್ಳಿ&ಧಾರವಾಡ ಪೂರ್ವ 1,206, ಹುಬ್ಬಳ್ಳಿ&ಧಾರವಾಡ ಕೇಂದ್ರ 991, ಹುಬ್ಬಳ್ಳಿ&ಧಾರವಾಡ ಪಶ್ಚಿಮ 1,053 ಹಾಗೂ ಕಲಟಗಿ 1,421 ಯುವ ಮತದಾರರು ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು.
ಹಕ್ಕು ಮತ್ತು ವಿವರ:
ಜಿಲ್ಲೆಯಲ್ಲಿ ಆ.29 ಮತ್ತು 30ರಂದು ಜರುಗಿದ ಮತದಾರರ ನೋಂದಣಿ ವಿಶೇಷ ಆಂದೋಲನದಲ್ಲಿ ಒಟ್ಟು 3,343 ಹಕ್ಕು ಮತ್ತು ಆೇಪಣೆಗಳ ಅಜಿರ್ಗಳು ಸ್ವೀಕೃತಗೊಂಡಿವೆ. ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ 2026 ವೇಳೆ ಮತಗಟ್ಟೆ ಅಧಿಕಾರಿಗಳು ಮನೆ ಮೆನೆ ಭೇಟಿ ನೀಡಿ ಗಣತಿ ಕಾರ್ಯ ಕೈಗೊಂಡಾಗ ವಿಳಾಸದಲ್ಲಿ ಲಭ್ಯವಿಲ್ಲದ ಅರ್ಹ ಮತದಾರರು ಅಂದರೆ ಗೈರು ಮತ್ತು ಸ್ಥಳಾಂತರ ಮತದಾರರು ಪಟ್ಟಿಯಲ್ಲಿ ಹೆಸರು ನೊಂದಣಿಗೆ ಅಜಿರ್ ಸಲ್ಲಿಸಬಹುದು. ಜತೆಗೆ ಭಾರತದ ಯಾವುದೇ ಪ್ರದೇಶದಲ್ಲಿ ಮತದಾರರಾಗಿ ನೋಂದಣಿಯಾಗದ ಮತ್ತು ಜಿಲ್ಲೆಯಲ್ಲಿ ಯಾವುದಾರರೂ ಮತ ಕ್ಷೇತ್ರದಲ್ಲಿ ಕಾಯಂ ರಹವಾಸಿಯಾಗಿರುವ ಅರ್ಹ ಮತದಾರರು ಹಾಗೂ ಆ.24ರಂದು ಪ್ರಕಟಿಸಿರುವ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಯಾಗದೆ ಇರುವ ಅರ್ಹ ಮತದಾರರು ಮತ್ತು 2026ರ ಅ.1ಕ್ಕೆ 18 ವರ್ಷ ರ್ಪೂಣಗೂಳ್ಳುವ ಅರ್ಹ ಮತದಾರರು ನಮೂನೆ&6 ದೊಂದಿಗೆ ನಿಗದಿತ ಘೋಷಣಾ ನಮೂನೆ ಭರ್ತಿ ಮಾಡಿ ಹೆಸರು ನೋಂದಣಿಗೆ ಅಜಿರ್ ಸಲ್ಲಿಸಬಹುದು ಎಂದು ಹೇಳಿದರು.
47,937 ನೋಟಿಸ್​:
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಡಿ ಜಿಲ್ಲೆಯಲ್ಲಿ ಈವರೆಗೆ 47,937 ನೋಟಿಸ್​ ಸಿದ್ಧಗೊಳಿಸಿದ್ದು, ಅವುಗಳಲ್ಲಿ 41,114 ನೋಟಿಸ್​ಗಳನ್ನು ಸಾರ್ವಜನಿಕರಿಗೆ ತಲುಪಿಸಲಾಗಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ, ನೋಟಿಸ್​ ಪಡೆದವರಲ್ಲಿ 17,075 ಮತದಾರರ ಹಿಯರಿಂಗ್​ ರ್ಪೂಣಗೊಂಡಿದೆ. 8,925 ಮತದಾರರು ಹಿಯರಿಂಗ್​ಗೆ ಹಾಜರಾಗದ ಹಿನ್ನೆಲೆಯಲ್ಲಿ ಅವರಿಗೆ 2ನೇ ಅವಕಾಶ ನೀಡಲಾಗುತ್ತಿದ್ದು, ಅಗತ್ಯ ದಾಖಲೆಗಳನ್ನು ಸಲ್ಲಿಸಿ, ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಸೂಚಿಸಲಾಗಿದೆ. ಇದಲ್ಲದೆ, 6,231 ಪ್ರಕರಣಗಳನ್ನು ಬಾಕಿ ಇದ್ದು, 10,818 ಅಜಿರ್ಗಳನ್ನು ಅಂತಿಮ ನಿಯಮ ಪ್ರಕ್ರಿಯೆಗೆ ಕಳುಹಿಸಲಾಗಿದೆ. ಅಂತಿಮ ಪ್ರಕಟಣೆಗಾಗಿ ಒಟ್ಟು 11,19,627 ಮತದಾರರ ವಿವರಗಳನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಕಾಂಗ್ರೆಸ್​ ಮುಖಂಡ ಪ್ರಕಾಶ ಹಳಿಯಾಳ, ಜೆಡಿಎಸ್​ ಮುಖಂಡ ದೇವರಾಜ ಕಂಬಳಿ, ಬಿಎಸ್​ಪಿ ಮುಖಂಡ ರೇವಣಸಿದ್ದಪ್ಪ ಹೊಸಮನಿ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net