10 ಮಹಿಳಾ ನ್ಯಾಯಾಧೀಶರ ವಿಶೇಷ ಕಲಾಪ!

ಧಾರವಾಡ ಹೈಕೋರ್ಟ್ ಪೀಠ.
ಧಾರವಾಡ ಹೈಕೋರ್ಟ್ ಪೀಠ.
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕದ ನ್ಯಾಯಾಂಗ ಇತಿಹಾಸದಲ್ಲಿಯೇ ಇದೇ ಮೊದಲು
  • ಆಗಸ್ಟ್​ 1ರಂದು ಈ ಹೊಸತನಕ್ಕೆ ಸಾಕ್ಷಿಯಾಗುತ್ತಿರುವ ಹೈಕೋರ್ಟ್​ ಧಾರವಾಡ ಪೀಠ
ಧಾರವಾಡ: ಹೈಕೋರ್ಟ್​ ಧಾರವಾಡ ಪೀಠವು ಕರ್ನಾಟಕದ ನ್ಯಾಯಾಂಗ ಇತಿಹಾಸದಲ್ಲಿಯೇ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ. ಆಗಸ್ಟ್​ 1ರಂದು ಒಟ್ಟು 10 ಮಹಿಳಾ ನ್ಯಾಯಮೂತಿರ್ಗಳ ನೇತೃತ್ವದ ಏಳು ನ್ಯಾಯಪೀಠಗಳು ಇಡೀ ದಿನದ ಕಲಾಪಗಳು ನಡೆಸಲಿವೆ.
ಈ ವಿಶೇಷ ಕಲಾಪವು ಮಹಿಳಾ ನ್ಯಾಯಮೂತಿರ್ಗಳ ನೇತೃತ್ವದಲ್ಲಿ ನಡೆಯುತ್ತಿರುವುದು ನ್ಯಾಯಾಂಗ ವ್ಯವಸ್ಥೆಯಲ್ಲಿ ಹೊಸ ಮೈಲಿಗಲ್ಲಾಗಲಿದೆ. ಪ್ರತ್ಯೇಕ ಮೂರು ವಿಭಾಗೀಯ ಪೀಠ ಹಾಗೂ ನಾಲ್ಕು ಏಕಸದಸ್ಯ ನ್ಯಾಯಪೀಠಗಳನ್ನು ರಚನೆ ಮಾಡಲಾಗಿದೆ. ಮಹಿಳಾ ಪ್ರಾತಿನಿಧ್ಯದ ಸಂಕೇತವಾಗಿ ಈ ಪ್ರಯತ್ನ ಮಾಡಲಾಗಿದೆ. ಕರ್ನಾಟಕ ಮುಖ್ಯ ನ್ಯಾಯಮೂತಿರ್ ವಿಭು ಬಖ್ರು ಅವರ ಆದೇಶದಂತೆ ಹೈಕೋರ್ಟ್​ನ ರಿಜಿಸ್ಟ್ರಾರ್​ (ನ್ಯಾಯಾಂಗ) ರೋಣ ವಾಸುದೇವ ಅವರು ಅಧಿಸೂಚನೆ ಹೊರಡಿಸಿದ್ದಾರೆ.
3 ವಿಭಾಗೀಯ ಪೀಠ:
ನ್ಯಾಯಮೂತಿರ್ ಅನು ಶಿವರಾಮನ್​, ನ್ಯಾ. ಕೆ.ಜಿ. ಶಾಂತಿ ಅವರನ್ನೊಳಗೊಂಡ ಪೀಠವು ಎಲ್ಲ ವಿಭಾಗೀಯ ಪೀಠದದಲ್ಲಿ ರಿಟ್​ ಮತ್ತು ಸಿವಿಲ್​ ಪ್ರಕರಣಗಳ ಪ್ರಾಥಮಿಕ ವಿಚಾರಣೆ, ಅಜಿರ್ಗಳು, ಆದೇಶಗಳು ಹಾಗೂ ಅಂತಿಮ ವಿಚಾರಣೆಯನ್ನು ನಡೆಸಲಿವೆ. ಅಧಿಸೂಚನೆಯಂತೆ ಹಿರಿಯ ನ್ಯಾ. ಅನು ಸಿವರಾಮನ್​, ನ್ಯಾ. ಕೆ.ಜಿ. ಶಾಂತಿ, ನ್ಯಾ. ಜ್ಯೂತಿ ಮೂಲಿಮನಿ, ನ್ಯಾ. ಪಿ. ಶ್ರೀಸುಧಾ, ನ್ಯಾ. ಲಲಿತಾ ಕೆನ್ನಾಗಂಟಿ ಹಾಗೂ ನ್ಯಾ. ಕೆ.ಎಸ್​. ಹೇಮಲೇಖ ಅವರ ನೇತೃತ್ವದ ಮೂರು ವಿಭಾಗೀಯ ನ್ಯಾಯಪೀಠಗಳು ಕಲಾಪ ನಡೆಸಲಿವೆ.
4 ಏಕ ಸದಸ್ಯ ಪೀಠ:
ಮೂರು ವಿಭಾಗೀಯ ಪೀಠಗಳ ಜತೆಗೆ 4 ಏಕ ಸದಸ್ಯ ಪೀಠಗಳನ್ನು ರಚಿಸಲಾಗಿದೆ. ನ್ಯಾ. ಚೆಲ್ಲಕೂರು ಸುಮಲತಾ, ನ್ಯಾ. ತಾರಾವಿತಸ್ತ ಗಂಜು, ನ್ಯಾ. ಕೆ.ಬಿ. ಗೀತಾ, ನ್ಯಾ. ರಾಜೇಶ್ವರಿ ಹೆಗ್ಡೆ ಅವರ ನೇತೃತ್ವದಲ್ಲಿ ಕಲಾಪಗಳು ನಡೆಯಲಿವೆ.
420 ಪ್ರಕರಣಗಳ ವಿಚಾರಣೆ:
ಮಹಿಳಾ ನ್ಯಾಯಮೂತಿರ್ಗಳ ನೇತೃತ್ವದಲ್ಲಿ ಹೈಕೋರ್ಟ್​ನ ಮೂರು ವಿಭಾಗೀಯ ಪೀಠ ಹಾಗೂ ನಾಲ್ಕು ಏಕಸದಸ್ಯ ಪೀಠದಲ್ಲಿ ಒಟ್ಟು 420 ಪ್ರಕರಣಗಳ ವಿಚಾರಣೆ ನಡೆಯಲಿದೆ. ಪ್ರತಿಯೊಂದು ಪೀಠದಲ್ಲಿ ತಲಾ 60 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಲಿಂಗ ಸಮಾನತೆ ಪಾಲನೆಗಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೈಗೊಂಡಿರುವ ಈ ನಿರ್ಧಾರವು ಮಹಿಳಾ ಸಬಲೀಕರಣಕ್ಕೆ ಬುನಾದಿ ಹಾಕಿದೆ.
"

ಈ ಐತಿಹಾಸಿಕ ಕಲಾಪಗಳನ್ನು ನಡೆಸುವುದಕ್ಕೆ ಹೈಕೋರ್ಟ್​ ಧಾರವಾಡ ಪೀಠವನ್ನು ಆಯ್ಕೆ ಮಾಡಿರುವುದು ವಿಕೇಂದ್ರೀಕರಣ ಮತ್ತು ಪ್ರಾದೇಶಿಕ ಪೀಠಗಳ ಸಾಂಸ್ಥಿಕ ಬಲವರ್ಧನೆ ಮೇಲಿನ ನಂಬಿಕೆಯನ್ನು ಹೆಚ್ಚಿಸಿದೆ. ಮಹಿಳಾ ಪೀಠಗಳು ನ್ಯಾಯದಾನ ಪ್ರಕ್ರಿಯೆಗೆ ಹೆಚ್ಚು ಸಹಾನುಭೂತಿ, ಸೂಕ್ಷ್ಮ ಹಾಗೂ ಪ್ರಗತಿಪರ ದೃಷ್ಟಿಕೋನವನ್ನು ತರಲಿವೆ. ವಕೀಲರ ಸಂವು ಸಲ್ಲಿದ್ದ ಮನವಿಗೆ ಸ್ಪಂದಿಸಿ ಈ ಕಲಾಪಗಳನ್ನು ನಡೆಸಲು ಆದೇಶ ಹೊರಡಿಸಿದ ಕರ್ನಾಟಕ ಮುಖ್ಯ ನ್ಯಾಯಮೂತಿರ್ ವಿಭು ಬಖ್ರು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ.

— ಬಿ.ಡಿ. ಹಿರೇಮಠ, ಅಧ್ಯಕ್ಷ, ಹೈಕೋರ್ಟ್​ ಧಾರವಾಡ ಪೀಠದ ವಕೀಲರ ಸಂಘ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net