ಸೋಯಾಬಿನ್​ ಬಿತ್ತನೆಗೆ ಹೆಚ್ಚಿನ ತೇವಾಂಶ ಅಗತ್ಯ

ಮಂಜುನಾಥ ಅಂತರವಳ್ಳಿ
ಮಂಜುನಾಥ ಅಂತರವಳ್ಳಿ
Published on
ಧಾರವಾಡ: ಮುಂಗಾರು ಪೂರ್ವ ಉತ್ತಮ ಮಳೆಯಾದ ಕಡೆಗಳಲ್ಲಿ ಮುಂಗಾರು ಬಿತ್ತನೆಗೆ ಭೂಮಿಯನ್ನು ಹದಗೊಳಿಸಿ ಮಣ್ಣಿನಲ್ಲಿ ಉತ್ತಮ ತೇವಾಂಶ ನೋಡಿಕೊಂಡು ಬಿತ್ತನೆ ಮಾಡಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ತಿಳಿಸಿದ್ದಾರೆ.
ಸೋಯಾಬಿನ್​ ಬೆಳೆಯು ಅತ್ಯಂತ ಸೂಕ್ಷ$್ಮ ಬೀಜ ಕವಚ ಹೊಂದಿದೆ. ರೈತರು ಮಣ್ಣಿನಲ್ಲಿ ತೇವಾಂಶ ಇದ್ದರೆ ಮಾತ್ರ ಬಿತ್ತನೆ ಮಾಡಬೇಕು. ಒಂದುವೇಳೆ ಸೋಯಾಬಿನ್​ ಬಿತ್ತುವ ಮುಂಚೆ ಬೀಜಗಳನ್ನು ಒರಟಾಗಿ ನಿರ್ವಹಿಸಿದರೆ ಅಥವಾ ಕಡಿಮೆ ತೇವಾಂಶವಿರುವ ಮಣ್ಣಿನಲ್ಲಿ ಬಿತ್ತನೆ ಮಾಡಿದರೆ ಮೊಳಕೆ ಪ್ರಮಾಣ ಖಂಡಿತವಾಗಿ ಕಡಿಮೆಯಾಗುತ್ತದೆ. ಜಿಲ್ಲೆಯ ಕೆಲವೆಡೆ ಮಳೆಯಾಗಿದ್ದು, ರೈತರು ಬಿತ್ತನೆ ಮಾಡುತ್ತಿದ್ದಾರೆ. ಆದರೆ, ಮಣ್ಣಿನಲ್ಲಿ ತೇವಾಂಶವಿದ್ದರೂ ಹೊರಗಡೆ ಬಿಸಿಲಿನ ವಾತಾವರಣ ಮುಂದುವರಿದಿದೆ. ಇದರಿಂದ ಬೀಜ ಮೊಳಕೆಯೊಡೆಯುವುದಿಲ್ಲ. ಮುಂಗಾರು ಬಿತ್ತನೆಗೆ ಸಾಕಷ್ಟು ಸಮಯವಿದ್ದು, ರೈತರು ಅವಸರ ಮಾಡಬಾರದು ಎಂದು ಮಂಜುನಾಥ ಅಂತರವಳ್ಳಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net