Solar power ಕಡಿಮೆ ವೆಚ್ಚದಲ್ಲಿ ಸೋಲಾರ ವಿದ್ಯುತ್​ ಉತ್ಪಾದನೆ

Solar power ಹುಬ್ಬಳ್ಳಿಯಲ್ಲಿ ಸೌರರಥ ಜನಜಾಗೃತಿ ಅಭಿಯಾನಕ್ಕೆ ಕೆಎಲ್​ಇ ತಾಂತ್ರಿಕ ವಿವಿ ಕುಲಪತಿ ಡಾ. ಪ್ರಕಾಶ ತೆವರಿ ಚಾಲನೆ ನೀಡಿದರು. ಡಾ. ಎಂ.ಆರ್​. ಪಾಟೀಲ, ಭಾಲಚಂದ್ರ ಜಾಬಶೆಟ್ಟಿ, ಪ್ರೊ. ವಿ.ಎಂ. ಸಣಗೌಡರ್​, ಡಾ. ನಾಗರಾಜ ಏಕಬೋಟೆ, ಡಾ. ಗಿರೀಶ ಚಳಗೇರಿ ಇತರರು ಇದ್ದರು
Solar power ಹುಬ್ಬಳ್ಳಿಯಲ್ಲಿ ಸೌರರಥ ಜನಜಾಗೃತಿ ಅಭಿಯಾನಕ್ಕೆ ಕೆಎಲ್​ಇ ತಾಂತ್ರಿಕ ವಿವಿ ಕುಲಪತಿ ಡಾ. ಪ್ರಕಾಶ ತೆವರಿ ಚಾಲನೆ ನೀಡಿದರು. ಡಾ. ಎಂ.ಆರ್​. ಪಾಟೀಲ, ಭಾಲಚಂದ್ರ ಜಾಬಶೆಟ್ಟಿ, ಪ್ರೊ. ವಿ.ಎಂ. ಸಣಗೌಡರ್​, ಡಾ. ನಾಗರಾಜ ಏಕಬೋಟೆ, ಡಾ. ಗಿರೀಶ ಚಳಗೇರಿ ಇತರರು ಇದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಸೌರ ರಥ ಜನಜಾಗೃತಿ ಅಭಿಯಾನಕ್ಕೆ ಚಾಲನೆ
ಹುಬ್ಬಳ್ಳಿ: solar power ಸೋಲಾರ ವಿದ್ಯುಚ್ಛಕ್ತಿ ಉತ್ಪಾದನಾ ಕ್ಷೇತ್ರದಲ್ಲಿನ ಇತ್ತೀಚಿನ ಸಂಶೋಧನೆಗಳಿಂದಾಗಿ ಕಡಿಮೆ ವೆಚ್ಚದಲ್ಲಿ ಸೋಲಾರ ಘಟಕಗಳನ್ನು ಅಳವಡಿಸಲು ಸಾಧ್ಯವಾಗಿದೆ ಎಂದು ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಡಾ. ಪ್ರಕಾಶ ತೆವರಿ ಹೇಳಿದರು.
ಇಲ್ಲಿಯ ವಿದ್ಯಾನಗರ ಕ್ಯಾಂಪಸ್​ನಲ್ಲಿ ಸೌರ ರಥ ಜನಜಾಗೃತಿ ಅಭಿಯಾನಕ್ಕೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.
ಜನ ಸಾಮಾನ್ಯರು ವಿದ್ಯುತ್​ ಸ್ವಾವಲಂಬನೆ ಹೊಂದಲು ಸರ್ಕಾರ ನೀಡುತ್ತಿರುವ ಸಬ್ಸಿಡಿಯಿಂದಾಗಿ ರಾಷ್ಟ್ರವ್ಯಾಪಿ ಆಂದೋಲನವಾಗಿ ಹೊರಹೊಮ್ಮುತ್ತಿದೆ. ಇನ್ನೂ ಹೆಚ್ಚು ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವವಿದ್ಯಾಲಯವು ಸೌರ ರಥ ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದೆ.
ಈ ದಿಸೆಯಲ್ಲಿ ಗ್ರೀನ್​ಲ್ಯಾಂಡ್​ ಬಯೋಟೆಕ್​ನ ಭಾಲಚಂದ್ರ ಜಾಬಶೆಟ್ಟಿ ಹಾಗೂ ದಾಕ್ಷಾಯಿಣಿ ಜಾಬಶೆಟ್ಟಿ ಅವರ ಶ್ರಮ ಸ್ತುತ್ಯಾರ್ಹವಾಗಿದೆ ಎಂದರು.
ಅಭಿಯಾನದ ಸಂಚಾಲಕ ಭಾಲಚಂದ್ರ ಜಾಬಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಮನೆ ಛಾವಣಿ ವಿದ್ಯುತ್​ ಉತ್ಪಾದನಾ ಘಟಕಗಳು ಹಾಗೂ ಸೋಲಾರ ಪಂಪ್​ಸೆಟ್​ಗಳ ಅಳವಡಿಕೆ ಕುರಿತು ರೈತರಲ್ಲಿ ಜಾಗೃತಿಯನ್ನುಂಟು ಮಾಡಲು ಮತ್ತು ತಾಂತ್ರಿಕ ಬೆಂಬಲ ನೀಡಲು ಪ್ರಥಮ ಹಂತದಲ್ಲಿ ಧಾರವಾಡ, ಬೆಳಗಾವಿ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಜಾಗೃತಿ ಸಭೆಗಳು, ಕಾರ್ಯಾಗಾರಗಳು, ವಿಚಾರ ಸಂಕಿರಣಗಳು ಮತ್ತು ಪ್ರಾತ್ಯಕ್ಷಿಕೆ ಮುಂತಾದವುಗಳನ್ನು ಏರ್ಪಡಿಸಲಾಗುತ್ತಿದೆ ಎಂದರು.
ಸಿವಿಲ್​ ಇಂಜಿನಿಯರಿಂಗ್​ ವಿಭಾಗದ ಮುಖ್ಯಸ್ಥ ಡಾ. ಎಂ.ಆರ್​. ಪಾಟೀಲ ಸ್ವಾಗತಿಸಿದರು.
ಪ್ರೊ. ವಿ.ಎಂ. ಸಣಗೌಡರ್​, ಡಾ. ನಾಗರಾಜ ಏಕಬೋಟೆ, ಡಾ. ಗಿರೀಶ ಚಳಗೇರಿ, ಡಾ. ವಿನಾಯಕ ಕುಲಕರ್ಣಿ, ಡಾ. ಮಹೇಶ ಗೋರಾವರ್​, ಡಾ. ವೀರೇಶ ಬಾಳಿಕಾಯಿ, ಪ್ರೊ. ಆನಂದ ಲಕ್ಕುಂಡಿ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net