society request ನಿಜಶರಣ ಅಂಬಿಗರ ಚೌಡಯ್ಯ ಮಾರ್ಗ ನಾಮಕರಣ ಮಾಡಿ

society request ಹುಬ್ಬಳ್ಳಿಯ ನಿಜಶರಣ ಅಂಬಿಗರ ಚೌಡಯ್ಯ ಸೇವಾ ಸಮಿತಿ ವತಿಯಿಂದ ಮೇಯರ್​ ದುರ್ಗಮ್ಮ ಬಿಜವಾಡ ಅವರನ್ನು ಅಭಿನಂದಿಸಲಾಯಿತು. ಶಶಿಕಾಂತ ಬಿಜವಾಡ, ಶಿವಾನಂದ ಅಂಬಿಗೇರ, ಮಂಜುನಾಥ ಬೆಡಸೂರ, ಹನಮಂತ ಅಂಬಿಗೇರ, ಮಯೂರ ನಟೇಕರ್​, ಇತರರು ಇದ್ದರು.
society request ಹುಬ್ಬಳ್ಳಿಯ ನಿಜಶರಣ ಅಂಬಿಗರ ಚೌಡಯ್ಯ ಸೇವಾ ಸಮಿತಿ ವತಿಯಿಂದ ಮೇಯರ್​ ದುರ್ಗಮ್ಮ ಬಿಜವಾಡ ಅವರನ್ನು ಅಭಿನಂದಿಸಲಾಯಿತು. ಶಶಿಕಾಂತ ಬಿಜವಾಡ, ಶಿವಾನಂದ ಅಂಬಿಗೇರ, ಮಂಜುನಾಥ ಬೆಡಸೂರ, ಹನಮಂತ ಅಂಬಿಗೇರ, ಮಯೂರ ನಟೇಕರ್​, ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಚೌಡಯ್ಯ ಸಮಾಜದಿಂದ ಮೇಯರ್​ ಸನ್ಮಾನ
  • ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಿ
ಹುಬ್ಬಳ್ಳಿ: society request ಇಲ್ಲಿಯ ನಿಜಶರಣ ಅಂಬಿಗರ ಚೌಡಯ್ಯ ಸೇವಾ ಸಮಿತಿ ವತಿಯಿಂದ ಮೇಯರ್​ ದುರ್ಗಮ್ಮ ಬಿಜವಾಡ ಅವರನ್ನು ನಗರದ ದೇಸಾಯಿ ಓಣಿ ದುರ್ಗಾದೇವಿ ದೇವಸ್ಥಾನದಲ್ಲಿ ಅಭಿನಂದಿಸಲಾಯಿತು.
ವಿವಿಧ ಬೇಡಿಕೆಗಳ ಪಟ್ಟಿ ನೀಡಿ ಈಡೇರಿಸಲು ಕೋರಲಾಯಿತು. ಹಳೇಹುಬ್ಬಳ್ಳಿ ವೃತ್ತದಿಂದ ಈಶ್ವರನಗರ ಮಾರ್ಗವಾಗಿ ನೇಕಾರನಗರ ಬೈಪಾಸ್​ ಕೆಳರಸ್ತೆವರೆಗೆ ಗಿರಿಯಾಲ ರಸ್ತೆಗೆ ನಿಜಶರಣ ಅಂಬಿಗರ ಚೌಡಯ್ಯ ಮಾರ್ಗ ಎಂದು ನಾಮಕರಣ ಮಾಡಬೇಕು.
ಸಾರ್ವಜನಿಕ ಸ್ಥಳದಲ್ಲಿ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರಿ ಜಮೀನು ಅಥವಾ ಜಾಗ ಮಂಜೂರು ಮಾಡಬೇಕು ಎಂದು ಮನವಿ ಮಾಡಲಾಯಿತು.
ಮನವಿ ಸ್ವೀಕರಿಸಿದ ಮೇಯರ್​ ದುರ್ಗಮ್ಮ ಅವರು ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಬಿಜೆಪಿ ಮುಖಂಡ ಶಶಿಕಾಂತ ಬಿಜವಾಡ, ಸೇವಾ ಸಮಿತಿ ಅಧ್ಯಕ್ಷ ಶಿವಾನಂದ ಅಂಬಿಗೇರ, ಮಂಜುನಾಥ ಬೆಡಸೂರ, ಹನಮಂತ ಅಂಬಿಗೇರ, ಅಶೋಕ ಕುರಿಯವರ, ಮಂಜುನಾಥ ಬೈರಣ್ಣವರ, ಸೈಯದಪ್ಪ ಅಂಬಿಗೇರ, ಗುರುಸಿದ್ದಪ್ಪ ಮಲ್ಲಾಪುರ, ರಮೇಶ ಬಾಎಕೇರ ಇತರರು ಇದ್ದರು.
ಸಮಿತಿ ಪ್ರಧಾನ ಕಾರ್ಯದರ್ಶಿ ಮಯೂರ ನಟೇಕರ್​ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net