ಚಳುವಳಿ ಬಿಂಬಿಸುವಲ್ಲಿ ಸಾಮಾಜಿಕ ಮಾಧ್ಯಮಗಳದ್ದು ಪ್ರಬಲ ಪಾತ್ರ

"ಭಾರತದ ರಾಜಕಾರಣದಲ್ಲಿ ಇತ್ತೀಚಿನ ಬೆಳವಣಿಗೆಗಳು' ವಿಷಯದ ವಿಶೇಷ ಉಪನ್ಯಾಸದಲ್ಲಿ ಡಾ. ಸಂಜೀವಕುಮಾರ ಎಚ್​.ಎಂ. ಮಾತನಾಡಿದರು.
"ಭಾರತದ ರಾಜಕಾರಣದಲ್ಲಿ ಇತ್ತೀಚಿನ ಬೆಳವಣಿಗೆಗಳು' ವಿಷಯದ ವಿಶೇಷ ಉಪನ್ಯಾಸದಲ್ಲಿ ಡಾ. ಸಂಜೀವಕುಮಾರ ಎಚ್​.ಎಂ. ಮಾತನಾಡಿದರು.
Published on
ಧಾರವಾಡ: ಪ್ರಸ್ತುತ ಸಾಮಾಜಿಕ ಮಾಧ್ಯಮಗಳು ಚಳುವಳಿ, ಹೋರಾಟ ಆಥವಾ ಪ್ರತಿಭಟನೆಗಳನ್ನು ಬಿಂಬಿಸುವಲ್ಲಿ ಪ್ರಬಲ ಪಾತ್ರ ವಹಿಸಿದ್ದು, ಪ್ರಸ್ತುತ ಪ್ರತಿಭಟನೆ, ಚಳುವಳಿಗಳ ಸ್ವರೂಪ ಬದಲಾಗುತ್ತಿದೆ ಎಂದು ದೆಹಲಿ ವಿವಿ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಸಂಜೀವಕುಮಾರ ಎಚ್​.ಎಂ. ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ಕಲಾ ಕಾಲೇಜಿನ ಐಕ್ಯೂಎಸಿ ಟಕ ಮತ್ತು ರಾಜ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ಕಾಲೇಜಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ "ಭಾರತದ ರಾಜಕಾರಣದಲ್ಲಿ ಇತ್ತೀಚಿನ ಬೆಳವಣಿಗೆಗಳು' ವಿಷಯದ ಕುರಿತು ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾತ್ಮಾ ಗಾಂಧಿ, ಭಗತ್​ ಸಿಂಗ್​, ಜಯಪ್ರಕಾಶ ನಾರಾಯಣ ಮತ್ತು ಅಣ್ಣಾ ಹಜಾರೆ ಅವರು ತಮ್ಮದೇ ಆದ ಪ್ರತಿಭಟನೆ ಮಾದರಿಯನ್ನು ಹೊಂದಿದ್ದರು. ಮಹಾತ್ಮ ಗಾಂಧಿ ಅವರು ಅಹಿಂಸಾತ್ಮಕ ಚಳುವಳಿಯ ಮೂಲಕ ಹೋರಾಟ ಪ್ರತಿಪಾದಿಸಿದ್ದರು. ಜಯಪ್ರಕಾಶ್​ ನಾರಾಯಣ ಅವರ ಚಳುವಳಿಯು ಜನರಲ್ಲಿ ಅರಿವು, ಜಾಗೃತಿ ಮತ್ತು ಮೌಖಿಕ ಸಂವಹನದ ಮೂಲಕ ಜನರನ್ನು ಚಳುವಳಿಗೆ ಸಂಟಿಸುತಿದ್ದರು. ಆದರೆ ಭಗತ್​ ಸಿಂಗ್​ ಚಳುವಳಿ ಬಲಪ್ರಯೋಗದಿಂದ ಕೂಡಿತ್ತು ಎಂದರು.
ಈಚೆಗೆ ದೆಹಲಿಯ ಜಂತರ ಮಂತರನಲ್ಲಿ ಝೆನ್​-ಜಿಗಳು ನಡೆಸಿದ ಪ್ರತಿಭಟನೆಯನ್ನು ಇಡೀ ಜಗತ್ತಿಗೆ ಕೊಂಡೊಯ್ಯಲು ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರು. ಗಾಂಧಿ ಚಳುವಳಿ ಮಾದರಿ ಜಗತ್ತಿನಲ್ಲಿ ಅತ್ಯಂತ ಜನಪ್ರಿಯ ಮಾದರಿಯಾಗಿದೆ. ಆದರೆ, ಯುವ ಸಮುದಾಯವು ಪ್ರತಿಭಟನೆ ಚಳುವಳಿ ಸ್ವರೂಪವನ್ನು ಬದಲಾಯಿಸಿದರು. ಸಿ.ಜೆ.ಪಿ. ನಡೆಸಿದ ಪ್ರತಿಭಟನೆ ಸಾಮಾಜಿಕ ಮಾಧ್ಯಮ ಪ್ರಭಾವದಿಂದ ಜಗತ್ತನ್ನು ಸೆಳೆಯಿತು ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾಲೇಜಿನ ಪ್ರಾಚಾರ್ಯ ಡಾ. ಐ.ಸಿ. ಮುಳಗುಂದ ಮಾತನಾಡಿ, ಪ್ರಸ್ತುತ ಯುವ ಸಮೂಹದ ಹೋರಾಟದ ಸ್ವರೂಪಗಳು ಬದಲಾಗುತ್ತಿವೆ. ಪ್ರಸ್ತುತ ಕೆನೆಪದರು ಮಿಸಲಾತಿಗೆ ಮಹತ್ವ ನೀಡುವುದು ಅಗತ್ಯವಿದ್ದು, ಅರ್ಹರಿಗೆ ಮೀಸಲಾತಿ ನೀಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸುರೇಶ ಹುಲ್ಲಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಎಂ.ಬಿ. ದಳಪತಿ, ಡಾ. ಎಸ್​.ಎಸ್​. ಶ್ರೀಗಿರಿ, ಡಾ. ವಿ.ಪಿ. ಸುಣಗಾರ, ಡಾ. ಹನುಮಂತ ಬಂಟನೂರ, ಡಾ. ಎಸ್​.ಜಿ. ಜಾಧವ, ಡಾ. ಎಸ್​.ಆರ್​. ಗಣಿ, ಡಾ. ರಕೀರ ಗುಳಗುಂಡಿ, ಡಾ. ಸಿ.ಬಿ. ಐನಳ್ಳಿ, ಡಾ. ಸಂತೋಷ ಧರನಾಯಕ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net