(small scale) ಪರಿಸರ ಸಂರಕ್ಷಣೆಗೆ ಒತ್ತು ಕೊಡಿ

ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ(small scale) ಕೆಎಸ್‌ಎಫ್‌ಸಿ ಸಭಾಂಗಣದಲ್ಲಿ ಆರ್‌ಎಎಂ ಯೋಜನೆಯಡಿ ಸೋಮವಾರ ಏರ್ಪಡಿಸಿದ್ದ ಒಂದು ದಿನದ ಜಾಗೃತಿ ಕಾರ್ಯಕ್ರಮ
ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ(small scale) ಕೆಎಸ್‌ಎಫ್‌ಸಿ ಸಭಾಂಗಣದಲ್ಲಿ ಆರ್‌ಎಎಂ ಯೋಜನೆಯಡಿ ಸೋಮವಾರ ಏರ್ಪಡಿಸಿದ್ದ ಒಂದು ದಿನದ ಜಾಗೃತಿ ಕಾರ್ಯಕ್ರಮ
Published on
ಹುಬ್ಬಳ್ಳಿ: ಪರಿಸರ ಸಂರಕ್ಷಣೆ ಬಗ್ಗೆ ಸಣ್ಣ ಕೈಗಾರಿಕೆಗಳು (small scale) ಒತ್ತು ಕೊಡಬೇಕು. ಬೇರೆ ದೇಶಗಳಲ್ಲಿ ಈ ನಿಯಮ ಜಾರಿಯಲ್ಲಿದೆ ಎಂದು ಉದ್ಯಮಿ ಶಶಿಧರ ಬಿಳೆಅಂಗಡಿ ಹೇಳಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಧಾರವಾಡ ಆಶ್ರಯದಲ್ಲಿ ಇಲ್ಲಿಯ ಗೋಕುಲ ರಸ್ತೆಯ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿರುವ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ, ಕೆಎಸ್‌ಎಫ್‌ಸಿ ಸಭಾಂಗಣದಲ್ಲಿ ಆರ್‌ಎಎಂ ಯೋಜನೆಯಡಿ ಸೋಮವಾರ ಏರ್ಪಡಿಸಿದ್ದ ಪರಿಸರ ಸಾಮಾಜಿಕ ನಿರ್ವಹಣೆ (ಇಎಸ್‌ಎಂ) ಸಂಬಂಧಿತ ಅವಕಾಶಗಳು ಹಾಗೂ ಬೆಂಬಲ ಕುರಿತ ಒಂದು ದಿನದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರಿಸರ ಸಂರಕ್ಷಣೆ ಮಾಡುವುದರಿಂದ ಕೈಗಾರಿಕೆಗಳಿಗೆ ಹಾಗೂ ಸಾರ್ವಜನಿಕರಿಗೂ ಒಳಿತಾಗಲಿದೆ. ಈ ನಿಟ್ಟಿನಲ್ಲಿ ನಾವೂ ಕಾರ್ಯತತ್ಪರರಾಗಬೇಕು ಎಂದು ಸಲಹೆಯಿತ್ತರು. ಎನ್‌ಕೆಎಸ್‌ಎಸ್‌ಐ ಅಧ್ಯಕ್ಷ ರಮೇಶ ಪಾಟೀಲ್ ಸೇರಿದಂತೆ ಇತರರು ಮಾತನಾಡಿದರು.
ಡಿಐಸಿ ಜಂಟಿ ನಿರ್ದೇಶಕ ಆರ್.ಎಚ್. ಶಿವಪುತ್ರಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗಿರೀಶ ನಲವಡಿ, ವಿಜೇಶ ಸೈಗಲ್, ನಾಗೇಶ ರಿತ್ತಿ, ಪ್ರಕಾಶ ಅಚಲ್ಕರ, ಶ್ರೀಪತಿ ಭಟ್, ಸಂದೀಪ ಬಿಡಾಸರಿಯಾ, ಮೈಖೇಲ್ ಮಡಕಟ್ಟಿ ಕೆಎಸ್‌ಪಿಸಿಬಿ ಅಧಿಕಾರಿ ಲಲಿತಾ, ಶಿವಾನಂದ ಕಮ್ಮಾರ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net