skill India ಕೌಶಲಯುತ ಭಾರತ ನಿರ್ಮಾಣಕ್ಕೆ ಹೆಜ್ಜೆ

skill India ಹುಬ್ಬಳ್ಳಿಯ ಕುಸುಗಲ್ಲ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕೌಶಲ ಪ್ರಮಾಣ ಪತ್ರ ವಿತರಣೆ ಸಮಾರಂಭದಲ್ಲಿ ರವೀಂದ್ರ ದ್ಯಾಬೇರಿಕರ್​, ಸಂತೋಷ ದಂಡಗಲ್​, ಐ.ಎಂ. ಇಳಕಲ್ಲ, ಎಲ್​.ಎಸ್​. ಪಾಟೀಲ ಇತರರು ಇದ್ದರು.
skill India ಹುಬ್ಬಳ್ಳಿಯ ಕುಸುಗಲ್ಲ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕೌಶಲ ಪ್ರಮಾಣ ಪತ್ರ ವಿತರಣೆ ಸಮಾರಂಭದಲ್ಲಿ ರವೀಂದ್ರ ದ್ಯಾಬೇರಿಕರ್​, ಸಂತೋಷ ದಂಡಗಲ್​, ಐ.ಎಂ. ಇಳಕಲ್ಲ, ಎಲ್​.ಎಸ್​. ಪಾಟೀಲ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸ್ಕಿಲ್​ ಇಂಡಿಯಾ ಮಹತ್ವದ ಅಭಿಯಾನ
  • ಉದ್ಯೋಗ ಆಧಾರಿತ ಕೌಶಲ ತರಬೇತಿ
ಹುಬ್ಬಳ್ಳಿ: skill India ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ವತಿಯಿಂದ ಜಾರಿಗೊಳಿಸಿರುವ ಸ್ಕಿಲ್​ ಇಂಡಿಯಾ ಅಭಿಯಾನವು ಉದ್ಯೋಗ ಆಧಾರಿತ ಕೌಶಲ ಒದಗಿಸಿ, ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಬಲ ತುಂಬುತ್ತಿದೆ ಎಂದು ಕೈಗಾರಿಕಾ ತರಬೇತಿ, ಉದ್ಯೋಗ ಇಲಾಖೆ ಮುಖ್ಯಸ್ಥ ರವೀಂದ್ರ ದ್ಯಾಬೇರಿಕರ್​ ಹೇಳಿದರು.
ತಾಲೂಕಿನ ಕುಸುಗಲ್ಲ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಕೌಶಲ ಪ್ರಮಾಣ ಪತ್ರ ವಿತರಣೆ ಸಮಾರಂಭದಲ್ಲಿ ಅವರು ಅತಿಥಿಗಳಾಗಿ ಮಾತನಾಡಿದರು.
ಅಭಿಯಾನದ ಪ್ರಮುಖ ಉದ್ದೇಶ ಯುವಕರನ್ನು ಉದ್ಯೋಗ, ಸ್ವಯಂ ಉದ್ಯೋಗ ಹಾಗೂ ಉದ್ಯಮಶೀಲತೆಗೆ ಸಜ್ಜುಗೊಳಿಸುವುದಾಗಿದೆ, ವಿದ್ಯಾರ್ಥಿಗಳಿಗೆ ಸ್ಕಿಲ್​ ಇಂಡಿಯಾದಡಿ ಹಲವು ಯೋಜನೆಗಳ ಮೂಲಕ ವಿವಿಧ ಕ್ಷೇತ್ರಗಳಲ್ಲಿ ತರಬೇತಿ ನೀಡಲಾಗುತ್ತಿದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷ ದಂಡಗಲ್​ ಮಾತನಾಡಿ, ಕೌಶಲಾಭಿವೃದ್ಧಿ ಮೂಲಕ ದೇಶದ ಯುವಜನತೆಯನ್ನು ಉದ್ಯೋಗಾರ್ಹರನ್ನಾಗಿ ರೂಪಿಸುವುದರ ಜೊತೆಗೆ ಕೈಗಾರಿಕೆಗಳ ಅಗತ್ಯಗಳಿಗೆ ತಕ್ಕ ಪರಿಣತ ಮಾನವ ಸಂಪನ್ಮೂಲ ಸೃಷ್ಟಿಸುವುದು ಅಭಿಯಾನದ ಗುರಿಯಾಗಿದೆ. ದೇಶದಾದ್ಯಂತ ಸಾವಿರಾರು ಐಟಿಐಗಳು ಕಾರ್ಯನಿರ್ವಹಿಸುತ್ತಿದ್ದು, ಕೋಟ್ಯಂತರ ಯುವಕರು ವಿವಿಧ ಕೌಶಲಾಭಿವೃದ್ಧಿ ಕಾರ್ಯಕ್ರಮಗಳ ಪ್ರಯೋಜನ ಪಡೆದಿದ್ದಾರೆ ಎಂದರು.
ಪ್ರಭಾರಿ ಮುಖ್ಯ ಶಿಕ್ಷಕ ಐ.ಎಂ. ಇಳಕಲ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಎಲ್​.ಎಸ್​. ಪಾಟೀಲ ಪ್ರಮಾಣ ಪತ್ರ ವಿತರಣೆ ನಡೆಸಿಕೊಟ್ಟರು. ಎಸ್​.ಡಿ.ಎಂ.ಸಿ. ಉಪಾಧ್ಯಕ್ಷ ಕಲ್ಲನಗೌಡ ಕೌಜಗೇರಿ, ಎನ್​.ಎಸ್​. ಯಲಿಗಾರ, ಅಶೋಕ ಶಿರಹಟ್ಟಿ, ಲೋಕೇಶ ಡಿ, ಬಸವರಾಜು, ಪಿ.ಕೆ. ಪತ್ತಾರ ಉಪಸ್ಥಿತರಿದ್ದರು.
ಸಂಜೀವಕುಮಾರ ಭೂಶೆಟ್ಟಿ ಸ್ವಾಗತಿಸಿದರು. ಪ್ರೀತಾ ಫರ್ನಾಂಡಿಸ್​ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net