ಆರೋಪಿಗಳ ವಿರುದ್ಧ ತ್ವರಿತ ನ್ಯಾಯಾಲಯದಡಿ ವಿಚಾರಣೆ ನಡೆಸಬೇಕು.
ಅನೇಕ ಫಿಟ್ನೆಸ್ ಕೇಂದ್ರಗಳಿಗೆ ಬೀಗ ಹಾಕಿದ್ದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲವ್ ಜಿಹಾದ್ ಆರೋಪಿ ಸಮೀರ ಮುಲ್ಲಾನ ಸಹೋದರಿ ವಿರುದ್ಧವೂ ತನಿಖೆ ನಡೆಯಬೇಕು ಎಂದರು.
ಈ ಹಿಂದೆ ಉತ್ತರ ಪ್ರದೇಶದ ಮಿರ್ಜಾಪುರದ ಜಿಮ್ಲ್ಲಿಯೂ ಲವ್ಜಿಹಾದ್ ಪ್ರಕರಣ ಬೆಳಕಿಗೆ ಬಂದಿತ್ತು. ಆಗ ಪೊಲೀಸರು ಅಲ್ಲಿನ ಅನೇಕ ಫಿಟ್ನೆಸ್ ಕೇಂದ್ರಗಳಿಗೆ ಬೀಗ ಹಾಕಿದ್ದರು.
ಹುಬ್ಬಳ್ಳಿಯಲ್ಲಿ ಲವ್ಜಿಹಾದ್ ಪ್ರಕರಣ ಬೆಳಕಿಗೆ ಬಂದು ಹಲವು ದಿನಗಳಾದರೂ, ಆರೋಪಿ ಸಮೀರ ಮುಲ್ಲಾ ಕಾರ್ಯನಿರ್ವಹಿಸುತ್ತಿದ್ದ ಜಿಮ್ ಗೆ ಪೊಲೀಸರು ಇನ್ನೂ ಏಕೆ ಬೀಗ ಜಡಿದಿಲ್ಲ ? ಎಂದು ಪ್ರಶ್ನಿಸಿದರು.
ಜಿಮ್ಗೆ ಬರುವ ಮಹಿಳೆಯರಿಗೆ ಪ್ರತ್ಯೇಕ ಮಹಿಳಾ ತರಬೇತುದಾರರು ಇಲ್ಲ. ಪುರುಷರು ಮಹಿಳೆಯರ ದೇಹ ಮುಟ್ಟಿ ತರಬೇತಿ ನೀಡುತ್ತಿದ್ದಾರೆ.
ಮಹಿಳೆಯರೊಂದಿಗೆ ಅಸಭ್ಯ ವರ್ತನೆ, ಲೈಂಗಿಕ ಕಿರುಕುಳ, ಬ್ಲಾಕ್ವೆುೕಲ್, ಹಣ ಹಾಗೂ ಆಭರಣ ದೋಚುವುದು, ಮತಾಂತರದಂತಹ ಕೆಲಸಗಳು ನಡೆಯುತ್ತಿವೆ.
ಆರೋಪಿಗಳ ವಿರುದ್ಧ ತ್ವರಿತ ನ್ಯಾಯಾಲಯದಡಿ ವಿಚಾರಣೆ ನಡೆಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಹೈಕೋರ್ಟ್ ವಕೀಲರಾದ ಶಕುಂತಲಾ ಶೆಟ್ಟಿ, ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ರಾಣಿ ಚಂದಾವರಿ, ನಿವೇದಿತಾ ಪ್ರತಿಷ್ಠಾಪನದ ಶ್ರೀನಿಧಿ ದೇಶಪಾಂಡೆ, ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.