mataram ಹುಬ್ಬಳ್ಳಿಯ ರಾಣಿ ಚನ್ನಮ್ಮ ಮೈದಾನದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನಾ ಸಮಾರಂಭದಲ್ಲಿ ವಿಶ್ವ ಹಿಂದೂ ಪರಿಷತ್ನ ರಾಷ್ಟ್ರೀಯ ಕಾರ್ಯದರ್ಶಿ ಗೋಪಾಲಜಿ ಮಾತನಾಡಿದರು.
ಲವ್ಜಿಹಾದ್ ನಡೆಸದಂತೆ ಮುಸ್ಲಿಂ ಸಮಾಜದ ಹಿರಿಯರು ಯುವಕರಿಗೆ ಬುದ್ಧಿ ಹೇಳಬೇಕು.
ದೇವಸ್ಥಾನಗಳ ಆದಾಯದಲ್ಲಿ ಸರ್ಕಾರ ಮೂಗು ತೂರಿಸಬಾರದು.
ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳ ವತಿಯಿಂದ ಇಲ್ಲಿಯ ರಾಣಿ ಚನ್ನಮ್ಮ ಮೈದಾನ (ಈದ್ಗಾ)ದಲ್ಲಿ ಮೂರು ದಿನಗಳವರೆಗೆ ಪ್ರತಿಷ್ಠಾಪಿಸಿದ್ದ ಭಗವಾಧ್ವಜ ಹಿಡಿದ ಗಣೇಶ ಮೂರ್ತಿ ವಿಸರ್ಜನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ವಂದೇ ಮಾತರಂ ರಾಷ್ಟ್ರಗೀತೆ ಆಗಬೇಕಿತ್ತು. ಬ್ರಿಟಿಷರ ವಿರುದ್ಧ ಹೋರಾಟಕ್ಕೆ ದೇಶದ ಜನರಿಗೆ ಪ್ರೇರಣೆ ನೀಡಿದ್ದೆ ವಂದೇ ಮಾತರಂ ಗೀತೆ. ಬ್ರಿಟಿಷರ ಅವಧಿಯಲ್ಲಿ ವಂದೇ ಮಾತರಂ ಗೀತೆ ಹಾಡುವುದು ಅಪರಾಧ ಆಗಿತ್ತು.
ಆದರೆ, ಇಂದಿನ ಸ್ವತಂತ್ರ ಭಾರತದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಗೀತೆಯನ್ನು ಸಂಪೂರ್ಣ ಹಾಡದಂತೆ ನೋಡಿಕೊಂಡಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯದ ಗೃಹ ಸಚಿವರಿಗೆ ಆರ್ಎಸ್ಎಸ್ ಕಂಡರೆ ಚೇಳು ಕಡಿದಂತೆ ಆಗುತ್ತದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದರೆ ಅವರಿಗೆ ಎಲ್ಲಿಲ್ಲದ ಭಯ ಎಂದು ಹೇಳಿದ ಅವರು, ರಾಜ್ಯದಲ್ಲಿನ ದೇವಸ್ಥಾನಗಳ ಆದಾಯದಲ್ಲಿ ಸರ್ಕಾರ ಮೂಗು ತೂರಿಸಬಾರದು.
ದೇವಸ್ಥಾನಗಳ ನಿರ್ವಹಣೆಯ ಹಕ್ಕನ್ನು ಸಂಬಂಧಿಸಿದ ದೇವಸ್ಥಾನಗಳ ಸಮಿತಿಗೆ ಸಂಪೂರ್ಣವಾಗಿ ಬಿಟ್ಟು ಕೊಡಬೇಕು. ಹಾಗಾದಲ್ಲಿ ದೊಡ್ಡ ದೇವಸ್ಥಾನಗಳು ಸಣ್ಣ ದೇವಸ್ಥಾನಗಳ ನಿರ್ವಹಣೆಯ ಜವಾಬ್ದಾರಿ ಹೊರುತ್ತವೆ ಎಂದರು.
ಮಸೀದಿ, ಚರ್ಚ್ಗಳಿಗೆ ಆಡಳಿತಾಧಿಕಾರಿ ನೇಮಿಸದ ಸರ್ಕಾರ, ಹಿಂದೂಗಳ ದೊಡ್ಡ ದೇವಾಲಯಗಳಿಗೆ ಆಡಳಿತಾಧಿಕಾರಿ ನೇಮಿಸಿರುವುದು ಎಷ್ಟು ಸರಿ ? ಎಂದು ಪ್ರಶ್ನಿಸಿದರು.
ಮುಸ್ಲಿಂ ಯುವತಿಯರ ಮತಾಂತರ : ಲವ್ಜಿಹಾದ್ ನಡೆಸದಂತೆ ಮುಸ್ಲಿಂ ಸಮಾಜದ ಹಿರಿಯರು ಯುವಕರಿಗೆ ಬುದ್ಧಿ ಹೇಳಬೇಕು. ಇಲ್ಲದಿದ್ದರೆ ಹಿಂದೂ ಸಂಘಟನೆಗಳ ಯುವಕರು ಸಹ ಮುಸ್ಲಿಂ ಯುವತಿಯರನ್ನು ಮದುವೆಯಾಗಿ ಮತಾಂತರಗೊಳಿಸಬೇಕಾಗುತ್ತದೆ ಎಂದು ವಿಶ್ವ ಹಿಂದೂ ಪರಿಷತ್ನ ರಾಷ್ಟ್ರೀಯ ಕಾರ್ಯದರ್ಶಿ ಗೋಪಾಲಜಿ ಹೇಳಿದರು.
ಹಿಂದೂ ಯುವಕರಿಗೆ ಶ್ರೀರಾಮನಂತೆ ಏಕಪತ್ನಿ ವೃತಸ್ಥನಾಗಿರುವುದೂ ಗೊತ್ತು, ಶ್ರೀ ಕೃಷ್ಣನಂತೆ ಬಹುಪತ್ನಿಯರನ್ನು ಹೊಂದುವುದೂ ಗೊತ್ತು ಎಂದರು.
ಭಾರತೀಯ ಮುಸ್ಲಿಮರು ಅರಬ್ ದೇಶದಿಂದ ಬಂದವರು ಅಲ್ಲ. ಮೊಘಲರಿಂದ ಬಲತ್ಕಾರಕ್ಕೆ ಒಳಗಾಗಿ, ಭಯದಿಂದ ಮತಾಂತರಗೊಂಡಿರುವ ಹಿಂದೂಗಳು ಅವರು.
ಈ ಸತ್ಯ ಮುಸ್ಲಿಮರಿಗೂ ಗೊತ್ತು. ಭಾರತೀಯ ಮುಸ್ಲಿಮರಲ್ಲಿ ಬಹಳಷ್ಟು ಜನರು ಒಳ್ಳೆಯವರಿದ್ದಾರೆ. ಅವರೆಲ್ಲ ದಾರಿ ತಪ್ಪಿರುವ ಯುವಕರಿಗೆ ಬುದ್ಧಿ ಹೇಳಲಿ. ಹಿಂದೂಗಳೊಂದಿಗೆ ಸೌಹಾರ್ದಯುತವಾಗಿ ಬಾಳಲಿ ಎಂದರು.
ರಾಜ್ಯಸಭಾ ಸದಸ್ಯ ಪ್ರೊ. ಎಂ. ನಾಗರಾಜ, ಶಾಸಕರಾದ ಮಹೇಶ ಟೆಂಗಿನಕಾಯಿ, ಸಿ.ಸಿ. ಪಾಟೀಲ, ಮೇಯರ್ ದುರ್ಗಮ್ಮ ಬೆಜವಾಡ, ಮಹಾಮಂಡಳದ ಅಧ್ಯಕ್ಷ ಸಂಜೀವ ಬಡಸ್ಕರ, ಗೌತಮ ಬಾಫಣಾ, ಡಾ. ವಿ.ಎಸ್.ವಿ. ಪ್ರಸಾದ, ಮಹಾದೇವ ಕರಮರಿ, ಇತರರಿದ್ದರು.