ಕಳ್ಳರ ತಂಡವೊಂದು ಜೈನ ಮಂದಿರಕ್ಕೆ ನುಗ್ಗಿ ಮೊದಲು ಸಿಸಿಟಿವಿ ಕ್ಯಾಮರಾಗಳ ಕೆಬಲ್ ಕತ್ತರಿಸಿದ್ದಾರೆ. ನಂತರ ದೇವಸ್ಥಾನದಲ್ಲಿದ್ದ ಮೂರು ಮೂರ್ತಿ ಮೇಲಿದ್ದ ಕಿರೀಟಿ, ಎರಡು ಚಕ್ರ, ಆರತಿ ತಟ್ಟೆ, ಹುಂಡಿಯಲ್ಲಿದ್ದ ಹಣ ಕದ್ದು ಪರಾರಿಯಾಗಿದ್ದಾರೆ. ಒಟ್ಟು 12 ಲಕ್ಷ ರೂ. ಮೌಲ್ಯದ ಮೂರ್ತಿ ಸಹಿತ ಬೆಳ್ಳಿ ಸಾಮಗ್ರಿ ಹಾಗೂ ಹುಂಡಿಯಲ್ಲಿದ್ದ 25 ಸಾವಿರ ರೂ. ಕಳವು ಮಾಡಿದ್ದಾರೆ. ಸ್ಥಳಕ್ಕೆ ವಿದ್ಯಾನಗರ ಠಾಣೆ ಪೊಲೀಸರು ಆಗಮಿಸಿದ್ದು, ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳದಿಂದ ಪರಿಶೀಲನೆ ನಡೆಸಿದ್ದಾರೆ.