sikshaka sangha ಪತ್ತಿನ ಸಹಕಾರ ಸಂಘದ ಕಾರ್ಯ ಶ್ಲಾಘನೀಯ

sikshaka sangha ಹುಬ್ಬಳ್ಳಿಯಲ್ಲಿ ಶನಿವಾರ ಏರ್ಪಡಿಸಿದ್ದ ಹುಬ್ಬಳ್ಳಿ ಶಹರ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಸಂಘದ 83ನೇ ವಾರ್ಷಿಕ ಮಹಾಸಭೆಯನ್ನು ಬಿಇಒ ಎಚ್.ಎಂ. ಫಡ್ನೇಶಿ ಉದ್ಘಾಟಿಸಿದರು.
sikshaka sangha ಹುಬ್ಬಳ್ಳಿಯಲ್ಲಿ ಶನಿವಾರ ಏರ್ಪಡಿಸಿದ್ದ ಹುಬ್ಬಳ್ಳಿ ಶಹರ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಸಂಘದ 83ನೇ ವಾರ್ಷಿಕ ಮಹಾಸಭೆಯನ್ನು ಬಿಇಒ ಎಚ್.ಎಂ. ಫಡ್ನೇಶಿ ಉದ್ಘಾಟಿಸಿದರು.
Published on
ಹುಬ್ಬಳ್ಳಿ: ಹುಬ್ಬಳ್ಳಿ ಶಹರ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಸಂಘದ sikshaka sangha 83ನೇ ವಾರ್ಷಿಕ ಮಹಾಸಭೆಯು ಇಲ್ಲಿಯ ಜೆ.ಸಿ. ನಗರದ ಮುನ್ಸಿಪಲ್ ಎಂಪ್ಲಾಯಿಸ್ ಹಾಲ್‌ನಲ್ಲಿ ಶನಿವಾರ ಏರ್ಪಡಿಸಲಾಗಿತ್ತು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಫಡ್ನೇಶಿ ಉದ್ಘಾಟಿಸಿ ಮಾತನಾಡಿ, ಶಿಕ್ಷಕರ ಆಗು-ಹೋಗುಗಳಿಗೆ ಪತ್ತಿನ ಸಹಕಾರ ಸಂಘ ಅಗತ್ಯವಿತ್ತು. ಈ ಕೆಲಸ ಮಾಡಿದ್ದಲ್ಲದೆ, ಶಿಕ್ಷಕರ ಏಳಿಗೆಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಸಂಘದ ಅಧ್ಯಕ್ಷ ಡಾ.ಎಚ್.ಎಂ. ಕುಂದರಗಿ ಅಧ್ಯಕ್ಷತೆ ವಹಿಸಿ ವಾರ್ಷಿಕ ವರದಿ ಓದಿದರು.
ನಿವೃತ್ತ ಶಿಕ್ಷಕರು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ವಿ.ಎಫ್. ಚುಳಕಿ, ನಿಕಟಪೂರ್ವ ಅಧ್ಯಕ್ಷ ಎಂ.ಎಚ್. ಜಂಗಳಿ, ಮುಖ್ಯಗುರು ಎಂ.ಎಸ್. ಶಿವಳ್ಳಿಮಠ, ಅಕ್ಷರ ದಾಸೋಹ ಅಧಿಕಾರಿ ಬಂಗಾರಿಮಠ, ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ, ಸಂಘದ ಪ್ರಧಾನ ಕಾರ್ಯದರ್ಶಿ ಹನುಮಂತಗೌಡ್ರ, ಉಪಾಧ್ಯಕ್ಷ ಬಿ.ಕೆ. ಕುರುಡಗಿ, ನಿರ್ದೇಶಕರಾದ ಎನ್.ಎಸ್. ಅವರಾದಿ, ಡಿ.ಎಫ್. ಈರಗಾರ, ಎಂ.ಎಸ್. ಗೊರವರ, ಎಂ.ವಿ. ರನ್ನವರ, ಮುತ್ತಣ್ಣ ದೊಡ್ಡಮನಿ, ಎನ್.ಎಲ್. ಪಾಟೀಲ, ಪಿ.ಜಿ. ಪೂಜಾರ, ಎ.ಬಿ. ಜಂತಲಿ, ಬಿ.ಬಿ. ಕೆರಿ, ಎಂ.ಯು. ಶಿರಹಟ್ಟಿ, ಜಿ.ಎನ್. ಕೂಬಿಹಾಳ, ಶಿವಾನಂದ ಗುಂಡೂರ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net