Akka ಅಕ್ಕಾ ಫೌಂಡೇಷನ್​ನಿಂದ ಸಹಿ ಸಂಗ್ರಹ

Akka ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಟ್ರಸ್ಟ್ ಅಧ್ಯಕ್ಷ ವೀರಪ್ಪ ಅರಕೇರಿ.
Akka ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಟ್ರಸ್ಟ್ ಅಧ್ಯಕ್ಷ ವೀರಪ್ಪ ಅರಕೇರಿ.
Published on

ಪ್ರಮುಖ ಮುಖ್ಯಾಂಶಗಳು

  • ತುಳಜಾಭವಾನಿ ದೇವಸ್ಥಾನ ಎದುರು ಕೊಳಚೆ ನೀರು ಮುಕ್ತಗೊಳಿಸಲು ಅಭಿಯಾನ.
  • ಪ್ರತಿ ಎರಡು ದಿನಗಳಿಗೊಮ್ಮೆ ತುಳಜಾಭವಾನಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುವುದು.
  • ನಾಲಾಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಟ್ರಸ್ಟ್ ಅಧ್ಯಕ್ಷ ವೀರಪ್ಪ ಅರಕೇರಿ, ದೇವಸ್ಥಾನ ಎದುರಿನ ಸರ್ಕಲ್​ನಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಯಲಿದೆ. ಮಳೆಗಾಲದ ಸಂದರ್ಭದಲ್ಲಿ ನಾಲಾ ತುಂಬಿ ಕೊಳಚೆ ನೀರು ದೇವಸ್ಥಾನದತ್ತ ಹರಿಯುತ್ತದೆ. ಇದನ್ನು ಸರಿಪಡಿಸಲು ಮಹಾನಗರ ಪಾಲಿಕೆಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದರು.
ನಾಲಾ ಸ್ವಚ್ಛಗೊಳಿಸುವ ಮೂಲಕ ತುಳಜಾಭವಾನಿ ದೇವಸ್ಥಾನದತ್ತ ಕೊಳಚೆ ನೀರು ಹರಿಯದಂತೆ ಮಹಾನಗರ ಪಾಲಿಕೆಯನ್ನು ಒತ್ತಾಯಿಸುವುದಕ್ಕಾಗಿ ಏ. 22ರಿಂದ ಜೂ. 5ರವರೆಗೆ ಪ್ರತಿ ಎರಡು ದಿನಗಳಿಗೊಮ್ಮೆ ತುಳಜಾಭವಾನಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ನಾಲಾದಲ್ಲಿ ಹೆಚ್ಚಿನ ಪ್ಲಾಸ್ಟಿಕ್ ಸೇರಿಕೊಂಡಿದ್ದು, ತೆರವುಗೊಳಿಸಿದರೆ ಮಳೆ ನೀರು ಹಾಗೂ ಕೊಳಚೆ ನೀರು ಸರಾಗವಾಗಿ ಹರಿದು ಹೋಗುತ್ತದೆ.
ಆದರೆ, ಹುಬ್ಬಳ್ಳಿಯಲ್ಲಿ ನಾಲಾಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಪ್ಲಾಸ್ಟಿಕ್ ನಿಷೇಧ ಇದ್ದರೂ ಅದರ ಬಳಕೆ ಇನ್ನೂ ಮುಂದುವರಿದಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸಾರ್ವಜನಿಕ ಶೌಚಗೃಹ ಇಲ್ಲದ ಕಾರಣ ತೊಂದರೆಯಾಗಿದೆ ಎಂದು ಇದೇ ಸಂದರ್ಭದಲ್ಲಿ ದೂರಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net