ಹುಬ್ಬಳ್ಳಿ: ನಗರದ ಶ್ರೀ ಸಿದ್ಧಾರೂಢ ಮಠದ (siddarudha) ಆವರಣದ ಪುಷ್ಕರಣಿಯಲ್ಲಿ ಶುಕ್ರವಾರ ಸಂಜೆ ಆರೂಢ ಆರತಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಶ್ರೀ ಸಿದ್ಧಾರೂಢ ಮಠದ ಈ ಪವಿತ್ರ ಪುಷ್ಕರಣಿಯಲ್ಲಿ ನಡೆಯುತ್ತಿರುವ ಆರೂಢ ಆರತಿ ಧರ್ಮ ಜಾಗೃತಿಯ ಸಂಕೇತವಾಗಿದೆ. ಶ್ರೀಮಠದಲ್ಲಿ ಇಡೀ ವರ್ಷ ಪೂಜ್ಯರಿಂದ ಪ್ರವಚನ ನಡೆಯುತ್ತಿರುವುದು ಮಾನವ ಕುಲಕ್ಕೆ ಸಂಸ್ಕಾರ, ಭಕ್ತಿಯ ಮಾರ್ಗದರ್ಶನವಾಗಿದೆ ಎಂದರು.
ಶ್ರೀಮಠದ ಟ್ರಸ್ಟ್ ಕಮಿಟಿ ಚೇರ್ಮನ್ ಬಾಳು ಮಗಜಿಕೊಂಡಿ ಅಧ್ಯಕ್ಷತೆ ವಹಿಸಿದ್ದರು.
ಶಾಂತಾಶ್ರಮದ ಶ್ರೀ ಅಭಿನವ ಸಿದ್ಧಾರೂಢ ಸ್ವಾಮೀಜಿ, ದೇವರ ಹುಬ್ಬಳ್ಳಿಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಟ್ರಸ್ಟ್ ಕಮೀಟಿಯ ವೈಸ್ ಚೇರ್ಮನ್ ಗೀತಾ ಕಲಬುರ್ಗಿ, ಗೌರವ ಕಾರ್ಯದರ್ಶಿ ವಿನಾಯಕ ಘೋಡಕೆ, ಧರ್ಮದರ್ಶಿಗಳಾದ ಚನ್ನವೀರ ಮುಂಗುರವಾಡಿ, ಮಂಜುನಾಥ ಮುನವಳ್ಳಿ, ಬಸವರಾಜ ಕಲ್ಯಾಣಶೆಟ್ಟರ್, ಶಾಮಾನಂದ ಪೂಜೇರಿ, ಉದಯಕುಮಾರ ನಾಯಕ, ಮಾಜಿ ಧರ್ಮದರ್ಶಿ ಎಸ್.ಐ. ಕೋಳಕೂರ, ವ್ಯವಸ್ಥಾಪಕ ಈರಣ್ಣ ತುಪ್ಪದ ಇತರರು ಇದ್ದರು.