ಹುಬ್ಬಳ್ಳಿ: ಇಲ್ಲಿಯ ಶ್ರೀ ಸಿದ್ಧಾರೂಢ ಸ್ವಾಮಿ siddarudha ಮಠದಲ್ಲಿ ಗುರು ಪೌರ್ಣಿಮೆ ನಿಮಿತ್ತ ಬುಧವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಬೆಳಗ್ಗೆ 6ಗಂಟೆಗೆ ಪೂಜೆ, ಮಧ್ಯಾಹ್ನ 12.30ಕ್ಕೆ ಅನ್ನ ಸಂತರ್ಪಣೆ, ಸಂಜೆ 5ಕ್ಕೆ ಪ್ರವಚನ ನಂತರ 7.15ಕ್ಕೆ ಶ್ರೀಗಳ ಮಂದಿರದಲ್ಲಿ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ ಜರುಗಿತು.
ಶ್ರೀ ಸಹಜಾನಂದ ಸ್ವಾಮೀಜಿ, ಶ್ರೀ ದಯಾನಂದಸರಸ್ವತಿ ಸ್ವಾಮೀಜಿ, ಶ್ರೀ ಸೋಮೇಶ್ವರಾನಂದ ಸ್ವಾಮೀಜಿ, ಶ್ರೀ ಶಾಂತಾನಂದ ಸ್ವಾಮೀಜಿ, ಶ್ರೀ ಸದಾಶಿವ ಗುರೂಜಿ, ಶ್ರೀ ಲಲಿತಾ ಮಾತಾಜಿ ಅವರನ್ನು ಸನ್ಮಾನಿಸಲಾಯಿತು.
ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿ ಚೇರ್ಮನ್ ಬಾಳು ಮಗಜಿಕೊಂಡಿ ಅಧ್ಯಕ್ಷತೆ ವಹಿಸಿದ್ದರು.
ವೈಸ್-ಚೇರ್ಮನ್ ಗೀತಾ ಟಿ. ಕಲಬುರ್ಗಿ, ಗೌರವ ಕಾರ್ಯದರ್ಶಿ ವಿನಾಯಕ ಘೋಡಕೆ, ಧರ್ಮದರ್ಶಿಗಳಾದ ಶಾಮಾನಂದ ಪೂಜೇರಿ, ಡಾ. ಗೋವಿಂದ ಮಣ್ಣೂರ, ಉದಯಕುಮಾರ ನಾಯ್ಕ, ಬಸವರಾಜ ಕಲ್ಯಾಣಶೆಟ್ಟರ, ಚನ್ನವೀರ ಮುಂಗುರವಾಡಿ ಇತರರಿದ್ದರು.