ಹುಬ್ಬಳ್ಳಿ: ನಗರದ ಶ್ರೀ ಸಿದ್ಧಾರೂಢ (siddarudha) ಸ್ವಾಮಿಗಳ ಮಠದ ಕೈಲಾಸ ಮಂಟಪದಲ್ಲಿ ಶ್ರೀ ಆರೋಢ ಸತ್ಸಂಗ ಬಳಗದಿಂದ ಪ್ರತಿ ದಿನ ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕಲಬುರ್ಗಿ ಜಿಲ್ಲೆಯ ಬೆಳ್ಳೂರು ಶ್ರೀ ಸಚ್ಚಿದಾನಂದ ಆಶ್ರಮ ಸಿದ್ಧಾರೂಢ ಮಠದ ಮಾತೋಶ್ರೀ ಅಮೃತಾನಂದ ಅವರು ಶನಿವಾರ ಆಗಮಿಸಿ, ಉಭಯ ಶ್ರೀಗಳ ಗದ್ದುಗೆ ದರ್ಶನಾಶ್ರೀರ್ವಾದ ಪಡೆದರು. ಈ ವೇಳೆ ಸತ್ಸಂಗ ಬಳದಿಂದ ಸನ್ಮಾನಿಸಲಾಯಿತು.
ಬಳಗದ ಪ್ರಮುಖರಾದ ಬಸವರಾಜ ಟೋಗಳಿ, ಗಂಗಾಧರ ಬಿರಾದಾರ, ಸದಾಶಿವ ಗದಗ, ನಾಗರಾಜ ಸಂಗಳಕರ, ಭದ್ರಶೆಟ್ಟಿ ನಾಗರಾಜ, ಅನಸೂಯಾ ಕಲಾದಗಿ, ಧರ್ಮಣ್ಣ ಕಾರಡಗಿ ಇತರರು ಇದ್ದರು.