jatrotsav ಅಮರಗೋಳ ಸಿದ್ದಪ್ಪಜ್ಜನ ಜಾತ್ರೆ 16ರಿಂದ

jatrotsav ಶ್ರೀ ಸಿದ್ದೇಶ್ವರ ಶಿವಾನುಭವ ಮಂಟಪ.
jatrotsav ಶ್ರೀ ಸಿದ್ದೇಶ್ವರ ಶಿವಾನುಭವ ಮಂಟಪ.
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧ ಮಠಾಧೀಶರಿಂದ ಪ್ರವಚನ
  • ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ
  • ಶ್ರೀ ಸಿದ್ದೇಶ್ವರ ಶಿವಾನುಭವ ಮಂಟಪ ಉದ್ಘಾಟನೆ
ಹುಬ್ಬಳ್ಳಿ: jatrotsav ಇಲ್ಲಿಯ ಅಮರಗೋಳ ಅಧ್ಯಾಪಕನಗರದ ಹಠಯೋಗಿ ಸದ್ಗುರು ಶ್ರೀ ಸಿದ್ದಪ್ಪಜ್ಜನವರ 166ನೇ ಜಯಂತಿ ಉತ್ಸವದ ಅಂಗವಾಗಿ ಡಿ. 16ರಿಂದ ಐದು ದಿನಗಳ ಕಾಲ ಸಂಭ್ರಮದ ಜಾತ್ರೋತ್ಸವ ಆಯೋಜಿಸಲಾಗಿದೆ.
ಮಣಕವಾಡದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಿತ್ಯ ಸಂಜೆ 7ಕ್ಕೆ ವಿವಿಧ ಮಠಾಧೀಶರಿಂದ ಶಿವಾನುಭವ ಪ್ರವಚನ ಹಾಗೂ ರಾತ್ರಿ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಕಳಸಾರೋಹಣ, ಸಿದ್ದಪ್ಪಜ್ಜನ ಮೂಲಗದ್ದುಗೆ ಮಠ ಉಣಕಲ್ಲನಿಂದ ಜ್ಯೋತಿ ತರುವುದು ಮುಂತಾದ ಧಾರ್ಮಿಕ ಆಚರಣೆಗಳು ನಡೆಯಲಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಉತ್ಸವ ಮೂರ್ತಿ ಮೆರವಣಿಗೆಯು ಭಜನೆ, ಮಂಗಲವಾದ್ಯ ಮೇಳಗಳೊಂದಿಗೆ ಗ್ರಾಮದಲ್ಲಿ ಜರುಗಲಿದೆ.

ಉದ್ಘಾಟನೆ:

ಡಿ. 16ರಂದು ಸಂಜೆ 7ಕ್ಕೆ ನೂತನವಾಗಿ ನಿರ್ಮಿಸಿದ ಸದ್ಗುರು ಶ್ರೀ ಸಿದ್ದೇಶ್ವರ ಶಿವಾನುಭವ ಮಂಟಪ, ತೇರಿನ ಮನೆ ಮತ್ತು ಪ್ರವಚನ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net