ಕಾಡಸಿದ್ದೇಶ್ವರ ಎಂಬ ಯತಿಗಳ ಪರಿಶ್ರಮದಿಂದ ಈ ಸ್ಥಳ ಇನ್ನೂ ಹೆಚ್ಚಿನ ಮಹತ್ವವನ್ನು ಪಡೆದು ಈ ಮಠದ ಧರ್ಮಾಧಿಕಾರಿಗಳೇ ಈ ದೇವಸ್ಥಾನದ ಅಧಿಕಾರ ವಹಿಸಿಕೊಂಡು ಬಂದಿರುವದು ಇತಿಹಾಸ. ಇದೀಗ ಮಠದ ಧರ್ಮಾಧಿಕಾರಿಗಳು, ಪ್ರಸ್ತುತ ಶ್ರೀಶೈಲ ಸೂರ್ಯಸಿಂಹಾಸನ ಪೀಠದ ಜಗದ್ಗುರು ಶ್ರೀ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಈ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ.