ಶ್ರೀ ವಿಜ್ಞಾನದೇವ ಜೀ ಮಹಾರಾಜರ ಸ್ವರ ವೇದ ಸಂದೇಶ ಯಾತ್ರೆ

ಧಾರವಾಡದಲ್ಲಿ ಬುಧವಾರ ಪತಂಜಲಿ ಯೋಗ ಪೀಠ ಕರ್ನಾಟಕದ ರಾಜ್ಯ ಪ್ರಭಾರಿ ಹಾಗೂ ಆಯೋಜನಾ ಸಮಿತಿ ಮಾರ್ಗದರ್ಶಕ ಭವರಲಾಲ ಆರ್ಯ ಅಧ್ಯಕ್ಷತೆಯಲ್ಲಿ ಸ್ವರ ವೇದ ಸಂದೇಶ ಯಾತ್ರೆಯ ಪೂರ್ವಸಿದ್ಧತಾ ಸಭೆ ಜರುಗಿತು.
ಧಾರವಾಡದಲ್ಲಿ ಬುಧವಾರ ಪತಂಜಲಿ ಯೋಗ ಪೀಠ ಕರ್ನಾಟಕದ ರಾಜ್ಯ ಪ್ರಭಾರಿ ಹಾಗೂ ಆಯೋಜನಾ ಸಮಿತಿ ಮಾರ್ಗದರ್ಶಕ ಭವರಲಾಲ ಆರ್ಯ ಅಧ್ಯಕ್ಷತೆಯಲ್ಲಿ ಸ್ವರ ವೇದ ಸಂದೇಶ ಯಾತ್ರೆಯ ಪೂರ್ವಸಿದ್ಧತಾ ಸಭೆ ಜರುಗಿತು.
Published on
ಧಾರವಾಡ: ಮುಂಬರುವ ಡಿಸೆಂಬರ್​ನಲ್ಲಿ ಪವಿತ್ರ ಆಧ್ಯಾತ್ಮಿಕ ನಗರ ಕಾಶಿ (ವಾರಾಣಸಿ)ಯಲ್ಲಿ ವಿಶ್ವವಿಖ್ಯಾತ ವಿಹಂಗಮ ಯೋಗ ಸಂಸ್ಥಾನವು ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ 25,000 ಕುಂಡಗಳ ವಿಶ್ವ ದಾಖಲೆಯ ವಿಶ್ವಶಾಂತಿ ಮಹಾಯಜ್ಞ ಆಯೋಜಿಸುತ್ತಿದೆ. ಈ ಮಹಾಯಜ್ಞಕ್ಕೆ ಭಕ್ತರನ್ನು ಆಹ್ವಾನಿಸಲು ಕಾಶಿಯ ವಿಹಂಗಮ ಯೋಗ ಆಶ್ರಮದ ಮಹಾನ್​ ಸಂತ ಪ್ರವರ ಶ್ರೀ ವಿಜ್ಞಾನದೇವ ಜೀ ಮಹಾರಾಜರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸ್ವರ ವೇದ ಸಂದೇಶ ಯಾತ್ರೆ ಕೈಗೊಂಡಿದ್ದಾರೆ ಎಂದು ಪತಂಜಲಿ ಯೋಗ ಪೀಠ ಕರ್ನಾಟಕದ ರಾಜ್ಯ ಪ್ರಭಾರಿ ಹಾಗೂ ಆಯೋಜನಾ ಸಮಿತಿ ಮಾರ್ಗದರ್ಶಕ ಭವರಲಾಲ ಆರ್ಯ ಹೇಳಿದರು.
ನಗರದ ಹೆಬ್ಬಳ್ಳಿ ರಸ್ತೆಯ ಶ್ರೀ ಚನ್ನಬಸವ ತಾಯವ್ವನವರ ಕಲ್ಯಾಣ ಮಂಟಪದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಭಾರತ ಸೇರಿ ವಿಶ್ವದ ಹಲವು ದೇಶಗಳಿಂದ ಲಕ್ಷಾಂತರ ಭಕ್ತರು ಮತ್ತು ಸಾಧಕರು ಭಾಗವಹಿಸಲಿದ್ದಾರೆ. ಯಾತ್ರೆಯ ಭಾಗವಾಗಿ ಶ್ರೀ ವಿಜ್ಞಾನದೇವ ಜೀ ಮಹಾರಾಜರು ಜು. 24ರಂದು ಸಂಜೆ 6ಕ್ಕೆ ನಗರದ ಹೆಬ್ಬಳ್ಳಿ ರಸ್ತೆಯ ಶ್ರೀ ಚನ್ನಬಸವ ತಾಯವ್ವನವರ ಕಲ್ಯಾಣ ಮಂಟಪಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಸುಮಾರು 3 ಗಂಟೆಗಳ ದಿವ್ಯ ಆಧ್ಯಾತ್ಮಿಕ ಕಾರ್ಯಕ್ರಮ ಜರುಗಲಿದೆ. ಶ್ರೀ ವಿಜ್ಞಾನದೇವ ಜೀ ಮಹಾರಾಜರರು ಅಮೃತಮಯ ಅಧ್ಯಾತ್ಮಿಕ ಸಂದೇಶ, 5 ಕುಂಡಗಳ ವಿಶ್ವಶಾಂತಿ ವೈದಿಕ ಹವನ, ಬ್ರಹ್ಮವಿದ್ಯಾ ವಿಹಂಗಮ ಯೋಗದ ಧ್ಯಾನ ಮತ್ತು ಸಾಧನೆಯ ಅಭ್ಯಾಸದ ಮಾರ್ಗದರ್ಶನ ನೀಡಲಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಎಲ್ಲರಿಗೂ ಆಹುತಿ ನೀಡಲು ಅವಕಾಶ ನೀಡಲಾಗುವುದು. ಅಲ್ಲದೆ, ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಭವರಲಾಲ ಆರ್ಯ ತಿಳಿಸಿದರು.
ಇದೇವೇಳೆ ವಿವಿಧ ಆಯೋಜನಾ ಸಮಿತಿಗಳನ್ನು ರಚಿಸಿ ಜವಾಬ್ದಾರಿಗಳನ್ನು ವಹಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net