ಕಲಾ ವಿಭಾಗದಲ್ಲಿ ಶ್ರಾವಣಿ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್

ಶ್ರಾವಣಿ ಪಾಟೀಲ
ಶ್ರಾವಣಿ ಪಾಟೀಲ
Published on
ಧಾರವಾಡ: ದ್ವಿತೀಯ ಪಿಯುಸಿಯಲ್ಲಿ ನಗರದ ಜೆಎಸ್​ಎಸ್​ ಶ್ರೀ ಮಂಜುನಾಥೇಶ್ವರ ಪಿಯು ಕಾಲೇಜಿನ ಕಲಾ ವಿಭಾಗದ ಶ್ರಾವಣಿ ಪಾಟೀಲ 595 ಅಂಕ ಗಳಿಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಪಡೆದಿದ್ದಾಳೆ.
ಕಲಬುರಗಿಯ ಶ್ರಾವಣಿ ಪಾಟೀಲ ತಂದೆ ವಿಜಯರೆಡ್ಡಿ ಪಾಟೀಲ, ತಾಯಿ ಡಾ. ಶ್ಯಾಮಲಾ. ತಂದೆ ಕಲಬುರಗಿಯಲ್ಲಿ ಉದ್ಯಮಿಯಾಗಿದ್ದು, ತಾಯಿ ವೈದ್ಯೆಯಾಗಿ ಹಾವೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತಂದೆ- ತಾಯಿಯ ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಗಿದೆ ಎನ್ನುತ್ತಾಳೆ ಶ್ರಾವಣಿ.
ಶ್ರಾವಣಿ ಎಸ್​ಎಸ್​ಎಲ್​ಸಿಯಲ್ಲಿ ಕಲಬುರಗಿ ಜಿಲ್ಲೆಗೆ ಪ್ರಥಮ ರ‍್ಯಾಂಕ್ ಪಡೆದಿದ್ದಳು. ಯುಪಿಎಸ್​ಸಿ ಗುರಿ ಇಟ್ಟುಕೊಂಡು ಕಲಾ ವಿಭಾಗ ಆಯ್ಕೆ ಮಾಡಿಕೊಂಡಿದ್ದಳು. ಧಾರವಾಡದ ಕಾಲೇಜುಗಳ ಬಗ್ಗೆ ವಿಚಾರಿಸಿದ್ದ ಪಾಲಕರು, ಜೆಎಸ್​ಎಸ್​ ಶ್ರೀ ಮಂಜುನಾಥೇಶ್ವರ ಪಿಯು ಕಾಲೇಜನ್ನು ಆಯ್ಕೆ ಮಾಡಿದ್ದರು.
ತನ್ನ ಸಾಧನೆಯ ಬಗ್ಗೆ "ವಿಜಯವಾಣಿ'ಯೊಂದಿಗೆ ಮಾತನಾಡಿದ ಶ್ರಾವಣಿ, "ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್​ ಬರುತ್ತೇನೆ ಎಂದು ನಿರೀಸಿರಲಿಲ್ಲ. ನನ್ನ ಓದಿಗೆ ಧಾರವಾಡದ ವಾತಾವರಣ, ಕಾಲೇಜು ಕ್ಯಾಂಪಸ್​, ಇಲ್ಲಿನ ಊಟ ನೆರವಾಯಿತು. ಹಾಸ್ಟೆಲ್​ನಲ್ಲಿದ್ದರೂ ತಂದೆ- ತಾಯಿ ದೂರವಾಣಿಯಲ್ಲೇ ನಿತ್ಯ ನನ್ನ ಅಭ್ಯಾಸಕ್ಕೆ ನೆರವಾಗುತ್ತಿದ್ದರು. ಜತೆಗೆ ಕಾಲೇಜಿನ ಶಿಕ್ಷಕರು ತುಂಬ ಪ್ರೋತ್ಸಾಹ ನೀಡಿದರು' ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net