ಸೋಮೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ಸಾವಿರಾರು ಭಕ್ತರು ಜಮಾಯಿಸಿ, ಅಭಿಷೇಕ ಮತ್ತು ಪೂಜೆ ಸಲ್ಲಿಸಿದರು. ಕೆಲಗೇರಿಯ ಕಲ್ಮೇಶ್ವರ ದೇವಸ್ಥಾನದಲ್ಲಿ ಉದ್ಭವ ಶಿವಲಿಂಗಕ್ಕೆ ನಸುಕಿನ ಜಾವದಿಂದಲೇ ಅಭಿಷೇಕ, ವಿಶೇಷ ಪೂಜೆ, ಬಿಲ್ವಾರ್ಚನೆ ಪ್ರಾರಂಭಿಸಲಾಗಿತ್ತು. ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರು, ಬಿಸಿಲನ್ನೂ ಲೆಕ್ಕಿಸದೆ ಸರದಿಯಲ್ಲಿ ನಿಂತು ಶಿವನ ದರ್ಶನ ಪಡೆದರು. ಜಯನಗರ ಈಶ್ವರ ದೇವಾಲಯ, ಶ್ರೀನಗರದ ಶಿವಾಲಯ, ಗಾಂಧಿನಗರದ ಈಶ್ವರ ದೇವಸ್ಥಾನ, ಕಾಮನಕಟ್ಟಿ ಬ್ರಹ್ಮಲಿಂಗೇಶ್ವರ ದೇವಾಲಯ, ಹೆಬ್ಬಳ್ಳಿ ಅಗಸಿ ಈಶ್ವರ ದೇವಾಲಯ, ಎಪಿಎಂಸಿ ಶಂಭುಲಿಂಗೇಶ್ವರ ದೇವಾಲಯ, ಶುಕ್ರವಾರ ಪೇಟ ಮುಖ್ಯ ರಸ್ತೆ ರಾಮಲಿಂಗೇಶ್ವರ ದೇವಸ್ಥಾನ, ಕುಮಾರೇಶ್ವರ ನಗರದ ಈಶ್ವರ ದೇವಸ್ಥಾನ, ವನಸಿರಿನಗರದ ನಾಗೇಶ್ವರ ದೇವಸ್ಥಾನ, ಸೈದಾಪುರ ಕಲ್ಮೇಶ್ವರ ದೇವಸ್ಥಾನ, ಕೊಪ್ಪದ ಕೇರಿ ಶಿವಾಲಯ, ಕುಮಾರೇಶ್ವರ ನಗರದ ಈಶ್ವರ ದೇವಸ್ಥಾನ, ಹೊಸ ಓಣಿಯ ಕಲ್ಮೇಶ್ವರ ದೇವಾಲಯ, ಜೋಶಿ ಗಲ್ಲಿಯ ಸಿದ್ಧರಾಮೇಶ್ವರ ದೇವಾಲಯ, ದೇಶಪಾಂಡೆ ಓಣಿ ತಾರಕೇಶ್ವರ ದೇವಸ್ಥಾನ, ಸತ್ತೂರು ಶಿವಾಲಯ ಸೇರಿ ನಗರದ ಶಿವನ ದೇವಾಲಯಗಳಲ್ಲಿ ಭಕ್ತ ಗಣವು ಮಹಾ ಶಿವರಾತ್ರಿಯ ವಿಶೇಷ ಪೂಜೆಗಳಲ್ಲಿ ಭಾಗವಹಿಸಿ ಭಕ್ತಿ ಸಮರ್ಪಣೆ ಮಾಡಿತು.