ಲೋಹದ ವಿಗ್ರಹ ತಯಾರಿಸುವ ಮತ್ತು ಈ ರೀತಿಯ ಕಲಾತ್ಮಕತೆ ರೂಪಿಸುವ ಹುಬ್ಬಳ್ಳಿಯ ಕಲಾವಿದರಾದ ಸಾಯಿನಾಥ ಹಿತ್ತಾಳೆ, ವಿಶ್ವನಾಥ ಹಿತ್ತಾಳೆ ಅವರ ಕೈಯಲ್ಲಿ ಇದು ಅರಳಿದೆ.
ಒಟ್ಟು 15 ಫೀಟ್ ಅಗಲ ಮತ್ತು 11 ಫೀಟ್ ಎತ್ತರದ ಈ ಕವಚ ರೂಪಿಸಲು ಬರೋಬ್ಬರಿ 2 ತಿಂಗಳು ಸಮಯ ತೆಗೆದುಕೊಂಡು ಪೂರ್ಣಗೊಳಿಸಿದ್ದಾರೆ. ಇದಕ್ಕಾಗಿ ಒಟ್ಟು 130 ಕೆಜಿ ಹಿತ್ತಾಳೆಯನ್ನು ಬಳಕೆ ಮಾಡಲಾಗಿದೆ.
ಈ ಕವಚದ ಮೇಲುಗಡೆ ಶಿವ-ಪಾರ್ವತಿ, ಎರಡು ನಂದಿ, ಎರಡು ಢಮರು, ಗಣೇಶ, ಷಣ್ಮುಖ ಹಾಗೂ ದ್ವಾರಪಾಲಕರ ಮೂರ್ತಿಗಳ ಚಿತ್ರ ಬಿಡಿಸಲಾಗಿದೆ. ಇದರ ಜತೆಗೆ ದ್ವಾದಶ ಜ್ಯೋತಿರ್ಲಿಂಗಗಳ ಚಿತ್ರವನ್ನೂ ಬಿಡಿಸಿದ್ದು, ಬೇರೆಡೆ ದರ್ಶನಕ್ಕೆ ಹೋಗಬೇಕೆನ್ನುವ ಭಕ್ತರ ಮನಸ್ಸನ್ನು ಈ ಚಿತ್ರಗಳು ಹಿಡಿದಿಡುತ್ತಿವೆ.
ಶ್ರಾವಣ ಮಾಸಕ್ಕೆ ಬರುವ ಭಕ್ತರಿಗಾಗಿಯೇ ಈ ದೃಶ್ಯಾವಳಿಗಳನ್ನು ರೂಪಿಸಲಾಗಿದೆ. ಹಾಗಾಗಿ ಪೂಜಾ ಕೈಂಕರ್ಯ ನೆರವೇರಿಸಲು ಬರುವ ಭಕ್ತರ ಮನಸ್ಸಿಗೆ ಭಕ್ತಿಯ ಸಿಂಚನ ಮೂಡಿಸುತ್ತಿವೆ.
ಈಗಾಗಲೇ ಬೇರೆ ಮೂರ್ತಿಗಳನ್ನು ಚಿನ್ನ, ಬೆಳ್ಳಿ ಸೇರಿ ಇತರ ಲೋಹಗಳಿಂದ ಸಿದ್ಧಪಡಿಸಿದ್ದೇವೆ. ಶಿವಮಂದಿರದ ಕವಚ ನಿರ್ಮಿಸಿಕೊಡಲು ದೇವಸ್ಥಾನದ ಆಡಳಿತ ಮಂಡಳಿಯವರು ಕೇಳಿಕೊಂಡಿದ್ದರು. ಶ್ರಾವಣದೊಳಗೆ ಮುಗಿಸಿಕೊಟ್ಟಿದ್ದೇವೆ. ಬಹಳಷ್ಟು ಭಕ್ತರು ಈ ದೃಶ್ಯಾವಳಿಗಳನ್ನು ನೋಡಿ ಭಕ್ತಿಯಿಂದ ನಮಿಸುತ್ತಿದ್ದಾರೆ ಎನ್ನುತ್ತಾರೆ ಕಲಾವಿದ ಸಾಯಿನಾಥ ಹಿತ್ತಾಳೆ.