ಧಾರವಾಡ: ವ್ಯಕ್ತಿ ಎಷ್ಟು ವರ್ಷ ಜೀವಿಸಿದರು ಎನ್ನುವುದಕ್ಕಿಂತ ಹೇಗೆ ಬದುಕಿದರು ಎಂಬುದು ಬಹಳ ಮುಖ್ಯ. ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಸಜ್ಜನರ ಮತ್ತು ತ್ಯಾಗಿಗಳ ಜೀವನ ಸಂದೇಶಗಳೇ ಆಧಾರಸ್ತಂಭಗಳಾಗಿರುತ್ತವೆ. ಅಂತಹ ಸಾಧಕರ ಪಂಕ್ತಿಯಲ್ಲಿ ಆಧುನಿಕ ಚಾಣಕ್ಯ ಡಾ. ಗಣಪತಿ ಭಟ್ಟರೂ ಸೇರುತ್ತಾರೆ ಎಂದು ರಾಮಕೃಷ್ಣ ಆಶ್ರಮದ ಸ್ವಾಮಿ ಶ್ರೀ ವಿಜಯಾನಂದ ಸರಸ್ವತಿ ಹೇಳಿದರು.
ನಗರದ ಆಲೂರು ವೆಂಕಟರಾವ ಸಾಂಸತಿಕ ಭವನದಲ್ಲಿ ಶಿಷ್ಯರು ಮತ್ತು ಅಭಿಮಾನಿಗಳು ಆಯೋಜಿಸಿದ್ದ ಗುರುಗೌರವಾರ್ಪಣ ಕಾರ್ಯಕ್ರಮದಲ್ಲಿ ವಿವೇಕ ಶತಕಂ ಗ್ರಂಥ ಲೋಕಾರ್ಪಣೆ ಮತ್ತು ಶಾಸ್ತ್ರಸಂಗೀತವಾರಿಧಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಗಣಪತಿ ಭಟ್ಟರು ಕೇವಲ 65 ವರ್ಷಗಳಲ್ಲಿ ಶತಮಾನದ ಸಾಧನೆ ಮಾಡಿದ್ದಾರೆ. ಗ್ರಂಥರಚನೆ, ಸಂಟನೆ, ಅಧ್ಯಾಪನ, ಕಲೆಗಳೆಂಬ ಪುರುಷಾರ್ಥ ಚತುಷ್ಟಯಗಳ ಮೂಲಕ ಸರ್ವತೋಮುಖ ಸಮಾಜ ನಿರ್ಮಾಣ ಮಾಡುತ್ತ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ ಎಂದರು.
"ಗುರುಚರಣಸರೋಜಂ' ಅಭಿನಂದನ ಗ್ರಂಥ ಬಿಡುಗಡೆ ಮಾಡಿದ ವಿಜಯಪುರದ ಶ್ರೀ ಶಿವಕುಮಾರ ಸ್ವಾಮೀಜಿ ಮಾತನಾಡಿ, ಅಧ್ಯಯನ ಸಮಯದಲ್ಲಿ ಅವರು ಸಂಟಿಸಿದ ಕಾರ್ಯಕ್ರಮದ ಯಶಸ್ಸಿನ ಸೂತ್ರವನ್ನು ನಮ್ಮ ಮಠದ ಅನೇಕ ಚಟುವಟಿಕೆಗಳಲ್ಲೂ ಅಳವಡಿಸಿಕೊಳ್ಳುತ್ತಿದ್ದೇವೆ ಎಂದರು.
ಮುಖ್ಯ ವಕ್ತಾರ ವಿದ್ವಾನ್ ಉಮಾಕಾಂತ ಭಟ್ ಮಾತನಾಡಿ, ಗಣಪತಿ ಭಟ್ಟರು ಧಾರವಾಡವನ್ನು ಮುಖ್ಯಕೇಂದ್ರವನ್ನಾಗಿಸಿಕೊಂಡು ಶಾಸ್ತ್ರ- ಸಂಗೀತಗಳ ಸಮನ್ವಯವೆಂಬ ಸೇತುವೆ ನಿಮಿರ್ಸಿದ್ದಾರೆ. ಅವರಿಗೆ ಪ್ರದಾನ ಮಾಡಿದ "ಶಾಸ್ತ್ರಸಂಗೀತವಾರಿಧಿ' ಪ್ರಶಸ್ತಿ ಸಾರ್ಥಕವಾಗಿದೆ ಎಂದರು.
ನಾಟ್ಯವಿದುಷಿ ರೋಹಿಣಿ ಇಮಾರತಿ "ನಾಟ್ಯಶತಕಂ' ಪುಸ್ತಕ ಲೋಕಾರ್ಪಣೆ ಮಾಡಿದರು.
ಪ್ರಶಸ್ತಿ ಪುರಸತ ಡಾ. ಗಣಪತಿ ಭಟ್ಟ ಮಾತನಾಡಿ, ಸಾಂತೂರು ಗ್ರಾಮದ ವರರುಚಿಸದನವೆಂಬ ಸಿದ್ಧಿಸ್ಥಾನದಲ್ಲಿದ್ದರೂ ಗ್ರಂಥರಚನೆ, ಅಧ್ಯಾಪನ ಕಾರ್ಯ ನಿರಂತರ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸಮರ್ಥ ಉತ್ತರಾಧಿಕಾರಿ ಶಿಷ್ಯರು ನನ್ನ ಯೋಜನೆಯನ್ನು ಸಾಕಾರಗೊಳಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.