ಶಾಂತಲಾ ನೃತ್ಯಾಲಯದ ಸಾಧನೆ

ಶಾಂತಲಾ ನೃತ್ಯಾಲಯದ ವಿದ್ಯಾರ್ಥಿನಿಯರ ತಂಡ.
ಶಾಂತಲಾ ನೃತ್ಯಾಲಯದ ವಿದ್ಯಾರ್ಥಿನಿಯರ ತಂಡ.
Published on

ನಾಗಪುರದಲ್ಲಿ ನಟರಾಜ್​ ಆರ್ಟ್​ ಆ್ಯಂಡ್​ ಕಲ್ಚರಲ್​ ಹೆರಿಟೇಜ್​ ನಡೆಸಿದ ರಾಷ್ಟ್ರಮಟ್ಟದ ಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ನಗರದ ಶಾಂತಲಾ ನೃತ್ಯಾಲಯದ ವಿದ್ಯಾರ್ಥಿನಿಯರು ವಿವಿಧ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಬಹುಮಾನ ಪಡೆದಿದ್ದಾರೆ.

ಬಾಲಪ್ರತಿಭೆ ವಿಭಾಗದಲ್ಲಿ ಮಾನ್ವಿತಾ ಚಂದಾವರಕರ ಹಾಗೂ ಶ್ರೀನಿಕಾ ರಂಗಪ್ಪನವರ ದ್ವೀತಿಯ ಸ್ಥಾನ, ಪ್ರಿಯಂವದಾ ಗುಳೇದಗುಡ್ಡ ತೃತೀಯ ಸ್ಥಾನ ಪಡೆದರೆ ವೇದಿಕಾ ರಂಗಪ್ಪನವರ ಮೆಚ್ಚುಗೆ ಪಡೆದಿದ್ದಾರೆ. ಭರತನಾಟ್ಯ ಜ್ಯೂನಿಯರ್​ ವಿಭಾಗದಲ್ಲಿ ಲಾವಣ್ಯ ಕಂಬಾರ ದ್ವೀತಿಯ, ಲಕ್ಷ್ಮಿ ಸಿಂದಗಿ ಹಾಗೂ ಪ್ರೀತಿ ಸಿಂದಗಿ ತೃತೀಯ ಬಹುಮಾನ ಗಳಿಸಿದ್ದಾರೆ.
ಹಿರಿಯ ವಿಭಾಗದಲ್ಲಿ ಸಂಚಿತಾ ಹೂಗಾರ, ಸಂಜನಾ ಹೂಗಾರ, ವೈಷ್ಣವಿ ಶೆಟ್ಟಿ ಪ್ರಥಮ ಬಹುಮಾನ ಶ್ರೇಯಾ ಲುಕ್ಕ, ಜಾನ್ವಿ ಶೆಟ್ಟಿ ದ್ವೀತಿಯ ಬಹುಮಾನ ಪಡೆದಿದ್ದಾರೆ.
ಭರತನಾಟ್ಯ ಮುಕ್ತ ವಿಭಾಗದಿಂದ ಕಾವೇರಿ ಪ್ರಥಮ ಬಹುಮಾನ, ಸೃಜನಾ ದ್ವೀತಿಯ, ರಂಜನಾ ತೃತೀಯ ಬಹುಮಾನ ಪಡೆದಿದ್ದಾರೆ. ಕಥಕ್​ ಸೋಲೋ ಸೀನಿಯರ್​ ವಿಭಾಗದಲ್ಲಿ ವಿಶಾಖಾ ಪ್ರಥಮ, ಆರೋಹಿ 2ನೇ ದ್ವೀತಿಯ ಬಹುಮಾನ ಪಡೆದಿದ್ದಾರೆ. ಈ ವಿದ್ಯಾಥಿರ್ನಿಯರ ನೇತೃತ್ವ ವಹಿಸಿದ್ದ ವಿದುಷಿ ವಿಜೇತಾ ವರ್ಣೇಕರ ಅವರಿಗೆ ಬೆಸ್ಟ್​ ಕೊರಿಯೋಗ್ರಾಫರ್​ ನೃತ್ಯ ಸೃಜನ್​ ಅವಾರ್ಡ್​ ನೀಡಿ ಗೌರವಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net