ಸೇವಾ ಸಂಕಲ್ಪ ಅಭಿಯಾನ ಸೆ. 17 ರಿಂದ seva

seva ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ
seva ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ
Published on

ಪ್ರಮುಖ ಮುಖ್ಯಾಂಶಗಳು

  • ಗುಜರಾತ ಮುಖ್ಯಮಂತ್ರಿಯಾಗಿ 13 ವರ್ಷ ಹಾಗೂ ಪ್ರಧಾನಿಯಾಗಿ 12 ವರ್ಷಗಳನ್ನು ಮೋದಿ ಪೂರೈಸಿದ್ದಾರೆ
  • ಮಕ್ಕಳಿಗಾಗಿ ವಿಕಸಿತ ಭಾರತ ಕುರಿತು ಚಿತ್ರಕಲೆ, ಭಾಷಣ ಕಾರ್ಯಕ್ರಮ ಏರ್ಪಡಿಸಲಾಗಿದೆ.
  • ನಮೋ ಸೇವಾ ಕಾರ್ಯಕ್ರಮದಡಿ ಬೀದಿ ನಾಟಕ
ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತ ಮುಖ್ಯಮಂತ್ರಿಯಾಗಿ 13 ವರ್ಷ ಹಾಗೂ ಪ್ರಧಾನಿಯಾಗಿ 12 ವರ್ಷಗಳನ್ನು ಮೋದಿ ಪೂರೈಸಿದ್ದಾರೆ ಎಂದರು.
ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುಂಚೆ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯಾವುದೇ ಹಗರಣ ನಡೆದಿಲ್ಲ. ಸ್ವಚ್ಛ ಆಡಳಿತ ನೀಡಿರುವ ಮೋದಿ ಸರ್ಕಾರ, ದೇಶ ಮೊದಲು ಎಂಬ ಧೋರಣೆಯೊಂದಿಗೆ ಆಡಳಿತ ನಡೆಸುತ್ತಿದೆ ಎಂದರು.
ಸೆ. 17ರಂದು ಪ್ರತಿ ಮನೆ ಹಾಗೂ ಮತಗಟ್ಟೆ ಎದುರು ಆಶೀರ್ವಾದ ದೀಪ ಹಚ್ಚುವ ಮೂಲಕ ಪ್ರಧಾನಿ ಅವರಿಗೆ ದೇಶದ ಜನರ ಆಶೀರ್ವಾದ ಕೋರಲಾಗುವುದು.
ಅ. 2ರಂದು ನಮೋ ಸೇವಾ ಗಾಥಾ, ಅ. 17ಕ್ಕೆ ಸೇವಾ ಸಂವಾದದ ಮಹಾಕುಂಬ ಹಮ್ಮಿಕೊಳ್ಳಲಾಗಿದೆ. ಈ ಮಧ್ಯೆ ಮಕ್ಕಳಿಗಾಗಿ ವಿಕಸಿತ ಭಾರತ ಕುರಿತು ಚಿತ್ರಕಲೆ, ಭಾಷಣ ಕಾರ್ಯಕ್ರಮ ಏರ್ಪಡಿಸಲಾಗಿದೆ.
ನಮೋ ಸೇವಾ ಕಾರ್ಯಕ್ರಮದಡಿ ಬೀದಿ ನಾಟಕ, ಅಂಗನವಾಡಿ ಕೇಂದ್ರಗಳಲ್ಲಿ ಮೂರು ದಿನಗಳ ಕಾರ್ಯಕ್ರಮ, ಪ್ರತಿ ಶಕ್ತಿ ಕೇಂದ್ರದಲ್ಲಿ ಡಿಜಿಟಲ್ ಕ್ರಾಂತಿ ಕುರಿತು ರೀಲ್ಸ್​ಗಳ ರಚನೆ, ವಡ್​ನಗರದಿಂದ ವಾರಣಾಸಿವರೆಗೆ ಯಾತ್ರೆ, ರಕ್ತದಾನ ಶಿಬಿರ, ಆರೋಗ್ಯ ಶಿಬಿರ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.
ಬ್ರಿಕ್ಸ್ ಮೆನು: ಬ್ರಿಕ್ಸ್ ಸಮ್ಮೇಳನದ ಯಶಸ್ಸನ್ನು ದೇಶದ ಜನ ಕೊಂಡಾಡುತ್ತಿರುವಾಗ ಕಾಂಗ್ರೆಸ್ ಮುಖಂಡರು ಸಮ್ಮೇಳನದ ಮೆನು ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಲೇವಡಿ ಮಾಡಿದರು.
ಬ್ರಿಕ್ಸ್ ಸಮ್ಮೇಳನದ ಬಗ್ಗೆ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಮುಖಂಡರಿಗೆ ಯಾವುದೇ ವಿಷಯಗಳು ಇಲ್ಲ. ಆ ಪಕ್ಷದವರಿಗೆ ಈ ಯಶಸ್ಸು ಸಹಿಸಿಕೊಳ್ಳಲು ಆಗುತ್ತಿಲ್ಲ.
ಹೀಗಾಗಿ, ಅಲ್ಲಿ ಮಾಡಿದ್ದ ಅಡುಗೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಬೇಜವಾಬ್ದಾರಿಯಿಂದ ಮಾತನಾಡುವುದು ಕಾಂಗ್ರೆಸ್​ನ ಹಳೇಯ ಚಾಳಿ. ಕಾಂಗ್ರೆಸ್ ಮೊದಲಿನಿಂದಲೂ ಭಾವನಾತ್ಮಕ ರಾಜಕಾರಣ ಮಾಡುತ್ತ ಬಂದಿದೆ.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇ ತಾನು ಎಂಬಂತೆ ಜನರೆದುರು ಹೇಳುತ್ತ ಬಂದ ಕಾಂಗ್ರೆಸ್, ನಂತರದ ದಿನಗಳಲ್ಲಿ ಇಂದಿರಾ ಗಾಂಧಿ ಹಾಗೂ ರಾಜೀವ ಗಾಂಧಿ ಅವರ ಚಿತಾಭಸ್ಮ ಹಿಡಿದು, ಜನರ ಭಾವನೆಗಳೊಂದಿಗೆ ಆಟವಾಡಿ ಅಧಿಕಾರ ಪಡೆಯಿತು ಎಂದು ಆರೋಪಿಸಿದರು.
ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಲಿಂಗರಾಜ ಪಾಟೀಲ, ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net