ಏ. 16ರಿಂದ ಮೇ 15ರವರೆಗೆ ಮನೆಪಟ್ಟಿ ಕಾರ್ಯ ಕೆಗೊಳ್ಳಲಾಗುವುದು. ಡಿಜಿಟಲ್ ಮೋಡ್ನಲ್ಲಿ ನಡೆಯುವ ಪ್ರಥಮ ಜನಗಣತಿ ಇದಾಗಿದೆ. ಗಣತಿದಾರರು ಮನೆಗೆ ಭೇಟಿ ನೀಡಿ ಎಸ್ಇ ಐಡಿ ಮೂಲಕ ಮಾಹಿತಿ ದಢೀಕರಿಸುತ್ತಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳು, ಎಲ್ಲ ಚಾರ್ಜ್ ಅಧಿಕಾರಿಗಳಿಗೆ ಮತ್ತು ೇತ್ರ ತರಬೇತುದಾರರಿಗೆ ತರಬೇತಿ ನೀಡಲಾಗಿದೆ. ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿ 1,363 ಮತ್ತು ನಗರ ಮತ್ತು ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 206 (ಮಹಾನಗರ ಪಾಲಿಕೆ ಹೊರತುಪಡಿಸಿ) ಜಿಲ್ಲೆಯಲ್ಲಿ 1,569 ಬ್ಲಾಕ್ಗಳನ್ನು ರಚಿಸಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ 2,047 ಬ್ಲಾಕ್ಗಳನ್ನು ರಚಿಸಲಾಗಿದೆ ಎಂದರು.