ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಸಾತಾರದಲ್ಲಿ ಮೇ 14ರಿಂದ 17ರವರೆಗೆ ಭಾರತದ ಅತಿ ದೊಡ್ಡ ಪ್ರಶಸ್ತಿಯಾದ 52ನೇ ಹಿಂದ್ಕೇಸರಿ ಹಾಗೂ 4ನೇ ಮಹಿಳಾ ಹಿಂದ್ಕೇಸರಿ ಹಾಗೂ ಇತರ ತೂಕದ ಆಧಾರದಲ್ಲಿ ರಾಷ್ಟ್ರೀಯ ಭಾರತೀಯ ಶೈಲಿಯ ಸ್ಪರ್ಧೆ ನಡೆಯಲಿದೆ. ಅದಕ್ಕಾಗಿ ಸಂಘದ ವತಿಯಿದ ರಾಜ್ಯ ಕುಸ್ತಿ ತಂಡವನ್ನು ಆಯ್ಕೆ ಮಾಡಲಾಗುತ್ತಿದೆ. ರಾಜ್ಯದ ಯಾವುದೇ ಭಾಗದ 18 ವರ್ಷ ಮೇಲ್ಪಟ್ಟ ಕುಸ್ತಿಪಟುಗಳು ಭಾಗವಹಿಸಬಹುದು. 18 ವರ್ಷದೊಳಗಿನವರು ಭಾಗವಹಿಸಲು ಬಯಸುವರು ಕಡ್ಡಾಯವಾಗಿ ವೈದ್ಯಕಿಯ ಪ್ರಮಾಣಪತ್ರ ಮತ್ತು ಪಾಲಕರ ಒಪ್ಪಿಗೆ ಪತ್ರ ತರಬೇಕು ಎಂದು ಮಠಪತಿ ತಿಳಿಸಿದರು.