Resignation ಎಸ್‌ಡಿಎಂಸಿ ಅಧ್ಯಕ್ಷ, ಸದಸ್ಯರ ಸಾಮೂಹಿಕ ರಾಜೀನಾಮೆ

ಧಾರವಾಡ ತಾಲೂಕಿನ ಹನುಮನಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಶಿಕ್ಷಕರ ಮೂಲಕ ಗ್ರಾಮೀಣ ಬಿಇಒ ಅವರಿಗೆ  ಸಾಮೂಹಿಕ ರಾಜೀನಾಮೆ Resignation  ಪತ್ರ ಸಲ್ಲಿಸಿದರು
ಧಾರವಾಡ ತಾಲೂಕಿನ ಹನುಮನಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಶಿಕ್ಷಕರ ಮೂಲಕ ಗ್ರಾಮೀಣ ಬಿಇಒ ಅವರಿಗೆ ಸಾಮೂಹಿಕ ರಾಜೀನಾಮೆ Resignation ಪತ್ರ ಸಲ್ಲಿಸಿದರು
Published on
ಉಪ್ಪಿನಬೆಟಗೇರಿ: ಧಾರವಾಡ ತಾಲೂಕಿನ ಹನುಮನಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ಸದಸ್ಯರು ಮುಖ್ಯ ಶಿಕ್ಷಕರ ಮೂಲಕ ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಾಮೂಹಿಕ ರಾಜೀನಾಮೆ (Resignation) ಪತ್ರ ಸಲ್ಲಿಸಿದ ಘಟನೆ ಶುಕ್ರವಾರ ನಡೆದಿದೆ.
ಶಾಲಾ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸದ ಮುಖ್ಯೋಪಾಧ್ಯಾಯರ ನಡೆಯಿಂದ ಬೇಸತ್ತು ರಾಜೀನಾಮೆ ನೀಡಿರುವುದಾಗಿ ಸಮಿತಿ ತಿಳಿಸಿದೆ.
ಶಾಲಾ ಅಭಿವೃದ್ಧಿ ಯೋಜನೆ ತಯಾರಿಸುವುದು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಲಿಕಾ ಗುಣಮಟ್ಟ ಸುಧಾರಣೆ, ಪಠ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರ್ಯಕ್ರಮ ರೂಪಿಸುವುವುದು, ಮಕ್ಕಳಲ್ಲಿ ಶಿಸ್ತು ಮತ್ತು ಮೌಲ್ಯಗಳನ್ನು ಬೆಳೆಸುವುದು, ತರಗತಿವಾರು ಪಾಲಕರ ಮಾಸಿಕ ಸಭೆ ಆಯೋಜಿಸುವುದು ಸೇರಿದಂತೆ ಶಾಲಾ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮ ರೂಪಿಸಲು ಸಮಿತಿ ಸಂಪೂರ್ಣ ಬೆಂಬಲ ನೀಡಿದರೂ ಇದಕ್ಕೆ ಸ್ಪಂದಿಸದ ಮುಖ್ಯೋಪಾಧ್ಯಾಯ ಎಸ್.ಎಂ. ಬೊಂಗಾಳೆ ಅವರ ನಿರ್ಲಕ್ಷ್ಯದಿಂದ ಬೇಸತ್ತು ರಾಜೀನಾಮೆ ನೀಡುತ್ತಿರುವುದಾಗಿ ಸದಸ್ಯರು ಪತ್ರದಲ್ಲಿ ತಿಳಿಸಿದ್ದಾರೆ.
ಎಸ್‌ಡಿಎಂಸಿ ಅಧ್ಯಕ್ಷ ಮೃತ್ಯುಂಜಯ ಯರಗಂಬಳಿಮಠ, ಉಪಾಧ್ಯಕ್ಷೆ ದೀಪಾ ದೊಡವಾಡ, ಸದಸ್ಯರಾದ ಬಸವರಾಜ ಬೊಬ್ಬಿ, ಅನಿಲ ಕಮ್ಮಾರ, ಪದ್ಮರಾಜ ಕಾಗಿ, ಸಿದ್ದನಗೌಡ ಪಾಟೀಲ, ರಜೀಯಾಬೇಗಂ ನದಾಫ್, ಸವಿತಾ ವಿಭೂತಿಮಠ, ಲಕ್ಷ್ಮೀ ಮೆಟ್ಟಿನ, ಮಲ್ಲಿಕಾರ್ಜುನ ಶಿರೂರ, ಶಿಕ್ಷಕಿ ಆರ್.ಎಸ್. ಮನಗೂಳಿ, ಪ್ರಕಾಶ ಹೂಗಾರ, ಇತರರು ಇದ್ದರು.
ಮುಖ್ಯ ಶಿಕ್ಷಕರ ನಿರ್ಲಕ್ಷ್ಯ
ಶಾಲಾ ಸಹ ಶಿಕ್ಷಕ ಶಿವಾನಂದ ಸವಸುದ್ದಿ ಅವರನ್ನು ಮೂರು ದಿನ ತಾತ್ಕಾಲಿಕವಾಗಿ ಬೇರೆ ಶಾಲೆಗೆ ನಿಯೋಜನೆ ಮಾಡಲಾಗಿತ್ತು. ಆದರೆ, ಎಸ್‌ಡಿಎಂಸಿ ಗಮನಕ್ಕೆ ತರದೇ ದಿಢೀರ್ ಆಗಿ ಅವರನ್ನು ಮೌಖಿಕ ಆದೇಶದ ಮೇಲೆ ವಾರಪೂರ್ತಿ ಬೇರೆ ಶಾಲೆಯ ಸೇವೆಗೆ ನಿಯೋಜನೆ ಮಾಡಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕ್ರಮ ಹಾಗೂ ಮುಖ್ಯಶಿಕ್ಷಕರ ನಿರ್ಲಕ್ಷ್ಯಕ್ಕೆ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net