ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಶುಕ್ರವಾರ ಆಯೋಜಿಸಿದ್ದ ಶ್ರೇಷ್ಠ ಭಾಷಾ ವಿಜ್ಞಾನಿ ಡಾ. ಆರ್.ಸಿ. ಹಿರೇಮಠ ದತ್ತಿ ಸಂಸ್ಮರಣೆ ಕಾರ್ಯಕ್ರಮದಲ್ಲಿ `ಆತ್ಮಕಥೆ ಉರಿಬರಲಿ ಸಿರಿಬರಲಿ' ವಿಷಯ ಕುರಿತು ಉಪನ್ಯಾಸ ನೀಡಿದರು. ಡಾ. ಆರ್.ಸಿ. ಹಿರೇಮಠ ಕಡು-ಬಡತನದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬಂದು, ಅಸಾಮಾನ್ಯರಾಗಿ ಬೆಳೆದು ಬಂದವರು. ತಮ್ಮ ಸ್ವಪ್ರತಿಭೆಯಿಂದಲೇ ಜ್ಞಾನ ದಾಸೋಹಿಯಾಗಿ, ಪ್ರಾಧ್ಯಾಪಕರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠ ಸ್ಥಾಪಕರಾಗಿ, ಕೊನೆಗೆ ಕುಲಪತಿಯಾಗಿ ವಿಶ್ವವಿದ್ಯಾಲಯ ಉನ್ನತ ಮಟ್ಟಕ್ಕೆ ಬೆಳೆಸಿದರು. ಒಬ್ಬ ಶ್ರೇಷ್ಠ ಸಂಶೋಧಕನಿಗಿರಬೇಕಾದ ವೈಜ್ಞಾನಿಕತೆ, ಸತ್ಯ ನಿಷ್ಠುರತೆ, ಪಾಂಡಿತ್ಯ ಅವರಲ್ಲಿತ್ತು ಎಂದರು.