science day ಶಿಕ್ಷಕರು ವಿಜ್ಞಾನ ತಂತ್ರಜ್ಞಾನದ ಅರಿವು ಹೊಂದಲಿ

science day ಹುಬ್ಬಳ್ಳಿಯ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ವಿಜ್ಞಾನ ಶಿಕ್ಷಕರ ಸಂಘದ ಕಾರ್ಯಕಾರಿಣಿಯಲ್ಲಿ ಡಿಡಿಪಿಐ ಉಮೇಶ ಬಮ್ಮಕ್ಕನವರ ಮಾತನಾಡಿದರು. ಬಿಇಒ ಎಚ್​.ಎಂ. ಫಡ್ನೆಶಿ, ಗೌರವಾಧ್ಯಕ್ಷ ಡಾ. ರವಿಕುಮಾರ ಬಾರಟಕ್ಕೆ, ಬಸವರಾಜ ಗಾಣಿಗೇರ, ಇತರರು ಇದ್ದರು.
science day ಹುಬ್ಬಳ್ಳಿಯ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ವಿಜ್ಞಾನ ಶಿಕ್ಷಕರ ಸಂಘದ ಕಾರ್ಯಕಾರಿಣಿಯಲ್ಲಿ ಡಿಡಿಪಿಐ ಉಮೇಶ ಬಮ್ಮಕ್ಕನವರ ಮಾತನಾಡಿದರು. ಬಿಇಒ ಎಚ್​.ಎಂ. ಫಡ್ನೆಶಿ, ಗೌರವಾಧ್ಯಕ್ಷ ಡಾ. ರವಿಕುಮಾರ ಬಾರಟಕ್ಕೆ, ಬಸವರಾಜ ಗಾಣಿಗೇರ, ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿಡಿಪಿಐ ಉಮೇಶ ಬಮ್ಮಕ್ಕನವರ ಅಭಿಮತ
  • ಕರ್ನಾಟಕ ಪ್ರೌಢಶಾಲೆ ಶಿಕ್ಷಕರ ವಿಜ್ಞಾನ ಸಂಘದ ಕಾರ್ಯಕಾರಿಣಿ
ಹುಬ್ಬಳ್ಳಿ: science day ವಿದ್ಯಾರ್ಥಿಗಳನ್ನು ಕಲಿಕೆಗೆ ಆಕರ್ಷಿಸುವ ನಿಟ್ಟಿನಲ್ಲಿ ತಂತ್ರಜ್ಞಾನದ ಸಮರ್ಪಕ ಬಳಕೆ ಮತ್ತು ಅರಿವು ಶಿಕ್ಷಕರಿಗೆ ಅಗತ್ಯವಾಗಿದೆ ಎಂದು ಧಾರವಾಡ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಉಮೇಶ ಬಮ್ಮಕ್ಕನವರ ಹೇಳಿದರು.
ಇಲ್ಲಿಯ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಭಾನುವಾರ ಕರ್ನಾಟಕ ಪ್ರೌಢಶಾಲಾ ವಿಜ್ಞಾನ ಶಿಕ್ಷಕರ ಸಂಘದ ವತಿಯಿಂದ ಏರ್ಪಡಿಸಿದ್ದ ರಾಜ್ಯದ ಪ್ರಥಮ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದರು.
ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇಂದು ಬದಲಾವಣೆಯ ಗಾಳಿ ಬೀಸುತ್ತಿದೆ. ಇಲ್ಲಿ ವಿಜ್ಞಾನ -ತಂತ್ರಜ್ಞಾನಗಳು ಪ್ರತಿಯೊಬ್ಬರ ದೈನಂದಿನ ಜೀವನದಲ್ಲಿ ಹಾಸು ಹೊಕ್ಕಾಗತೊಡಗಿವೆ. ಅದರಲ್ಲೂ ಕೃತಕ ಬುದ್ಧಿಮತ್ತೆ, ಮಷಿನ್​ ಲರ್ನಿಂಗ್​, ಜೈವಿಕ ತಂತ್ರಜ್ಞಾನಗಳಲ್ಲಿ ಬಹಳ ವೇಗವಾಗಿ ಅನ್ವೇಷಣೆಗಳಾಗುತ್ತಿವೆ. ಇಂತಹ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಹೊರಜಗತ್ತಿಗೆ ತೆರೆದುಕೊಳ್ಳುತ್ತಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಶ್ರೀಧರ ಪಾಟೀಲಕುಲಕರ್ಣಿ ಮಾತನಾಡಿ, ಇದೊಂದು ವಿಜ್ಞಾನ ಶಿಕ್ಷಣ ಅಭಿವೃದ್ಧಿ ಮತ್ತು ವಿಜ್ಞಾನ ಶಿಕ್ಷಕರನ್ನು ಜ್ಞಾನ ಮತ್ತು ಕೌಶಲಗಳಿಂದ ಸಂಪದ್ಭರಿತಗೊಳಿಸುವ ಸಂಘಟನೆಯಾಗಿದೆ ಎಂದರು.
ರಾಜ್ಯದಲ್ಲಿ ಕಿಶೋರ ಹಂತದಲ್ಲಿರುವ ವಿದ್ಯಾರ್ಥಿಗಳ ಬೆಳವಣಿಗೆಗೆ ತಕ್ಕಂತೆ ವಿಜ್ಞಾನವನ್ನು ಪರಿಣಾಮಕಾರಿಯಾಗಿ ಬೋಧಿಸುವಲ್ಲಿ, ಪಠ್ಯಕ್ರಮ, ಮೌಲ್ಯಮಾಪನಗಳಲ್ಲಿ ನಾವೀನ್ಯತೆ ಅಳವಡಿಸಿಕೊಳ್ಳುವಲ್ಲಿ ಸಹಕಾರ ನೀಡುತ್ತದೆ ಎಂದರು.
ಹುಬ್ಬಳ್ಳಿ ಶಹರ ಬಿಇಒ ಎಚ್​.ಎಂ. ಫಡ್ನೆಶಿ, ಸಂಘದ ಗೌರವಾಧ್ಯಕ್ಷ ಡಾ. ರವಿಕುಮಾರ ಬಾರಟಕ್ಕೆ ಪ್ರತಿಜ್ಞಾ ವಿಧಿ ಬೋಧಿಸಿದರು.
ರಾಜ್ಯ ಉಪಾಧ್ಯಕ್ಷರಾದ ಜವಾನರ, ಅನುಪಮಾ, ಕಾಂತರಾಜು, ಮುನಿರಾಜು, ಖಜಾಂಚಿ ಬಸವರಾಜ ಗಾಣಿಗೇರ, ಸಂತೋಷಕುಮಾರ ಗಜಕೋಶ, ವಿ.ಎಸ್​. ಹುದ್ದಾರ, ಸಂಜೀವಕುಮಾರ ಭೂಶೆಟ್ಟಿ, ಪ್ರಮೋದ ವಾದಿರಾಜ, ರಾಜಶೇಖರ, ಎನ್​.ಎಸ್​. ಹಿರೇಮಠ, ಸತೀಶ ಮರಿಯಕ್ಕನವರ, ಬಸವರಾಜ ಲೋಬೋಗೋಳ, ಪ್ರವಿಣ ಸುಣಗಾರ, ಜುಲ್ಫಿಕರ ಆವುಂಟಿ, ಸ್ಮೀತಾ ವಡಗಾವಿ, ವನಮಾಲಾ ಹೆಗಡೆ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net